ವಿಜ್ಞಾನ

ಗೂಗಲ್ ನಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ನೊಡನೆ ಕನ್ನಡದಲ್ಲಿಯೂ ಇರಲಿದೆ ಸ್ಥಳಗಳ ಹೆಸರು

ಇನ್ನು ಮುಂದೆ ಗೂಗಲ್ ನಕಾಶೆ (ಮ್ಯಾಪ್) ನಲ್ಲಿ ಈಗ ಸ್ಥಳಗಳ ಹೆಸರನ್ನು ಕನ್ನಡದಲ್ಲಿಯೂ ಓದಿ ತಿಳಿಯಲು ಸಾದ್ಯ. ಇಲ್ಲಿಯವರೆಗೆ ಕೇವಲ ಇಂಗ್ಲಿಷ್‍ನಲ್ಲಿ ಮಾತ್ರ ಇದ್ದ ಸ್ಥಳ ನಾಮಗಳನ್ನು ಇಂಗ್ಲಿಷ್ ಜತೆಗೆ ಕನ್ನಡದಲ್ಲಿ ಸಹ ಪ್ರಕಟಿಸಿದ ಗೂಗಲ್ ಸಂಸ್ಥೆಯ ಕ್ರಮವನ್ನು ಕನ್ನಡಿಗರು ಕೊಂಡಾಡಿದ್ದಾರೆ. ಇಷ್ಟೂ ದಿನ ತಮಿಳು ನಾಡಿನ ನಕ್ಷೆಗಳಲ್ಲಿ ತಮಿಳು, ಆಂದ್ರ ಪ್ರದೇಶದ ನಕ್ಷೆಗಳಲ್ಲಿ ತೆಲುಗು ಬರುತ್ತಿದ್ದರೂ ಕರ್ನಾಟಕದ ಭಾಗದ ನಕ್ಷೆಗಳಲ್ಲಿ ಕನ್ನಡ ಸಿಗುತ್ತಿರಲಿಲ್ಲ. ಆದರೆ ಇದೀಗ ಗೂಗಲ್ ನಕ್ಷೆಯಲ್ಲಿ ಕನ್ನಡ ಪ್ರತ್ಯಕ್ಷವಾಗಿದೆ. ಕೆಲವು ಕಡೆ ಸ್ಥಳಗಳ […]

ವಿಜ್ಞಾನ

ಹೊರಗುತ್ತಿಗೆ ಏರಿಕೆ, ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಲು ಇಸ್ರೋ ಯೋಜನೆ

ಹೆಚ್ಚುತ್ತಿರುವ ಬೇಡಿಕೆಯನ್ನು ತಲುಪುವ ಉದ್ದೇಶದಿಂದ ಉಪಗ್ರಹ ಉಡಾವಣೆಯನ್ನು ದ್ವಿಗುಣಗೊಳಿಸಿ, ಹೊರಗುತ್ತಿಗೆ ಏರಿಕೆ ಮಾಡುವುದಕ್ಕೆ ಇಸ್ರೋ ಯೋಜನೆ ರೂಪಿಸಿದೆ. ಈ ಬಗ್ಗೆ ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕ ಮೈಲ್‌ಸ್ವಾಮಿ ಅಣ್ಣಾದುರೈ ಮಾಹಿತಿ ನೀಡಿದ್ದು, ಪ್ರಸ್ತುತ ವಾರ್ಷಿಕವಾಗಿ ಇಸ್ರೋ ತಾನು ನಿರ್ಮಿಸುವ 10 ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುತ್ತಿದೆ. ಆದರೆ ಅಗತ್ಯತೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 2018-19 ರ ವೇಳೆಗೆ ಉಪಗ್ರಹ ಉಡಾವಣೆಯನ್ನು ದುಪ್ಪಟ್ಟುಗೊಳಿಸಿ  ವಾರ್ಷಿಕವಾಗಿ 18-20 ಉಪಗ್ರಹಗಳನ್ನು ಉಡಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ […]

ವಿಜ್ಞಾನ

ಭಾರತದ ದೇಸಿ ನಿರ್ಮಿತ ಸಬ್‍ಸೋನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆಗೆ ಸಿದ್ಧ

2016 ರ ಡಿಸೆಂಬರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ವಿಫಲಗೊಂಡಿದ್ದ ದೇಸಿ ನಿರ್ಮಿತ ಸಬ್ ಸೋನಿ ಕ್ರೂಸ್ ಕ್ಷಿಪಣಿ ನಿರ್ಭಯ್ 5 ನೇ ಪರೀಕ್ಷೆಗೆ ಸಜ್ಜುಗೊಂಡಿದೆ. ಮುಂದಿನ ವಾರ ಕ್ಷಿಪಣಿಯ ಪರೀಕ್ಷೆ ನಡೆಸುವುದಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಡಿಆರ್ ಡಿಒ ಮುಖ್ಯಸ್ಥ ಎಸ್ ಕ್ರಿಸ್ಟೊಫೋರ್ ತಿಳಿಸಿದ್ದಾರೆ. ಮೂರು ದಿನಗಳ ಅಂತಾರಾಷ್ಟ್ರೀಯ ಫಿಪ್ಸ್ಫಿಸಿಕಾನ್-2017 ಸಮ್ಮೇಳನದ ಪಾರ್ಶ್ವದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಹಿಂದಿನ ಪರೀಕ್ಷೆ ವೇಳೆಯಲ್ಲಿ ವಿಫಲವಾಗುವುದಕ್ಕೆ ಕಾರಣವಾಗಿದ್ದ ತೊಡಕುಗಳನ್ನು ನಿವಾರಿಸಲಾಗಿದೆ ಎಂದು ಡಿಆರ್ ಡಿಒ ಮುಖ್ಯಸ್ಥರು ತಿಳಿಸಿದ್ದಾರೆ. ನಿರ್ಭಯ್ […]

ವಿಜ್ಞಾನ

2018 ರಿಂದ ಗೂಗಲ್ ಕ್ರೋಮ್ ನಲ್ಲಿ ರೀಡೈರೆಕ್ಟ್ ಜಾಹೀರಾತುಗಳ ಹಾವಳಿ ಇರುವುದಿಲ್ಲ!

ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ. ಕ್ರೋಮ್ ನ ಪೋಪ್ ಅಪ್ ಬ್ಲಾಕರ್ ಹಾಗೂ ಆಟೋ ಪ್ಲೇ ಪ್ರೊಟೆಕ್ಷನ್ ನಂತೆಯೇ, ಹೊಸ ಪ್ರೊಟೆಕ್ಷನ್ ಟೂಲ್ ಗಳನ್ನು ಕ್ರೋಮ್ ಜಾರಿಗೆ ತರಲು ಉದ್ದೇಶಿಸಿದ್ದು, ಬಳಕೆದಾರರಿಗೆ ಎಲ್ಲಾ ರೀತಿಯ ರಕ್ಷಣೆ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರಿಗೆ ಕಿರಿಕಿರಿಯನ್ನುಂಟುಮಾಡುವ ರೀಡೈರೆಕ್ಟ್ ಜಾಹೀರಾತುಗಳನ್ನು ತಡೆಗಟ್ಟಲು ಕ್ರೋಮ್ ಈ ಕ್ರಮ ಕೈಗೊಂಡಿದ್ದು, ಕೆಲವೊಮ್ಮೆ ಏಕಾಏಕಿಯಾಗಿ ಕಾರಣವೇ ಇಲ್ಲದೇ ಹೊಸ […]