ಪ್ರಚಲಿತ ವಿದ್ಯಮಾನ ಸಾಮಾನ್ಯ ಸುದ್ದಿ

ನಾಲ್ಕು ದಿನಗಳ ಕೃಷಿ ಮೇಳಕ್ಕೆ ತೆರೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಏರ್ಪಡಿಸಿರುವ ಕೃಷಿ ಮೇಳಕ್ಕೆ ಇಂದು ಸಂಜೆ ತೆರಬೀಳಲಿದೆ. ಅನ್ನದಾತನ ಬದುಕಿನಲ್ಲಿ ಮಂದಹಾಸ ಮೂಡಿಸುವ ಪ್ರಯತ್ನವಾಗಿ ವಿಶ್ವವಿದ್ಯಾಲಯ ಪ್ರತಿವರ್ಷ ಏರ್ಪಡಿಸುತ್ತಿರುವ ಕೃಷಿ ಮೇಳಕ್ಕೆ ಲಕ್ಷಾಂತರ ಮಂದಿ ಕೃಷಿ ಆಸಕ್ತರು ಆಗಮಿಸಿ ಕೃಷಿಯಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲ ಅವರು ಬೆಂಗಳುರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಯುಎಎಸ್)ನಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿದ್ದರು. […]

ಪ್ರಚಲಿತ ವಿದ್ಯಮಾನ

ನಕಲಿ ಪೊಲೀಸ್ ಗ್ಯಾಂಗ್ ಸೆರೆ

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಮವಸ್ತ್ರ ಧರಿಸಿ ನಕಲಿ ಲಾಠಿ ಪಿಸ್ತೂಲು ಹಿಡಿದು ನಗರದ ಹೊರ ವಲಯ ಹಾಗೂ ನೈಸ್ ರಸ್ತೆಯ ಸುತ್ತಮುತ್ತ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ಜೀಪ್‌ನಲ್ಲಿ ಸಂಚರಿಸುತ್ತ ವಿಶೇಷ ಪೊಲೀಸ್ ತಂಡವೆಂದು ಹೇಳಿಕೊಂಡು ಸಾರ್ವಜನಿಕರು, ಪ್ರೇಮಿಗಳನ್ನು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಮವಸ್ತ್ರ, ಬೆಲ್ಟ್ ಕ್ಯಾಪ್ ಧರಿಸಿ ಲಾಠಿ ಹಿಡಿದು ನಕಲಿ ಪಿಸ್ತೂಲನ್ನು ಬೆಲ್ಟ್‌ಗೆ ಸಿಗಿಸಿಕೊಂಡಿದ್ದ. ಕನಕಪುರದ ನರಸಿಂಹಯ್ಯನ ದೊಡ್ಡಿಯ ರಘು (34), ಸಫಾರಿ ಉಡುಪಿನಲ್ಲಿದ್ದ ತಮ್ಮನಾಯಕನಹಳ್ಳಿಯ ದೊಡ್ಡಯ್ಯ […]

ಪ್ರಚಲಿತ ವಿದ್ಯಮಾನ

ಚೀನಾದ ‘ಒಬೋರ್’ ಗೆ ಮೊದಲ ಹಿನ್ನಡೆ; ಸಿಪಿಇಸಿಯಿಂದ ಡ್ಯಾಮ್ ಯೋಜನೆ ಕೈ ಬಿಟ್ಟ ಪಾಕಿಸ್ತಾನ!

ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ  ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಸಿಪಿಇಸಿ ಚೌಕಟ್ಟಿನಲ್ಲಿ ಸೇರಿಸುವ ಪ್ರಸ್ತಾವವನ್ನು ಪಾಕಿಸ್ತಾನ ಸರ್ಕಾರ ಕೈಬಿಟ್ಟಿದೆ  ಎಂದು ಹೇಳಲಾಗಿದೆ. ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳ […]