ಆರೋಗ್ಯ

ಆಸ್ಪತ್ರೆಗಳಲ್ಲಿ ಸೇವಾ ಸೌಲಭ್ಯ : ರೋಗಿಗಳು ನಿರಾಳ

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ರಾಜ್ಯಾದ್ಯಂತ ನಡೆಸುತ್ತಿದ್ದ ಮುಷ್ಕರ ಕೈಬಿಟ್ಟು ಸೇವೆಗೆ ಹಾಜರಾಗಿರುವುದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ನಿನ್ನೆ ಸಂಜೆಯಿಂದಲೇ ಕೆಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಆರಂಭವಾಗಿದ್ದರೂ, ಇಂದು ಬೆಳಿಗ್ಗೆಯಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆ ನಡೆಯುತ್ತಿದೆ. ಹೊರರೋಗಿಗಳ ಘಟಕ (ಒಪಿಡಿ)ಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ರೋಗಿಗಳು ಅನುಭವಿಸಿದ ನರಕಯಾತನೆ ದೂರವಾದಂತಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ, ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳಿಗೆ […]

ಆರೋಗ್ಯ

ಖಿನ್ನತೆ ದೂರ ಮಾಡಲು ಔಷಧಗಳಿಗಿಂತ ಸಂಸ್ಕಾರಗಳು ಪರಿಣಾಮಕಾರಿ:ಅಧ್ಯಯನ ವರದಿ

ಖಿನ್ನತೆಯನ್ನು ದೂರ ಮಾಡಲು ಔಷಧಗಳಿಗಿಂತ ಸಂಸ್ಕಾರಗಳು, ನೈತಿಕ ಮೌಲ್ಯಗಳು ಮೈಗೂಡುವಂತೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಜವಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಅಧ್ಯಯನ ವರದಿ ಹೇಳಿದೆ. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ಪರಿಸ್ಥಿತಿಯನ್ನು ಔಷಧಗಳು ಹಾಗೂ ಮನೋವೈದ್ಯಶಾಸ್ತ್ರ ಮತ್ತಷ್ಟು ಕುಗ್ಗಿಸುತ್ತಿವೆ. ಆದರೆ ಭಜನೆಗಳನ್ನು, ಸಂಗೀತ, ಕೀರ್ತನೆಗಳನ್ನು ಕೇಳುವುದರಿಂದ ಮಾನಸಿಕ ಸಮಸ್ಯೆ, ಖಿನ್ನತೆ ದೂರವಾಗುತ್ತದೆ ಎಂದು ಜೆಎನ್ ಯು ನಲ್ಲಿರುವ ಸಂಸ್ಕೃತ ಕೇಂದ್ರದ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ಜೆಎನ್ ಯು ಸಂಸ್ಕೃತ ಕೇಂದ್ರದಿಂದ ಇದೇ ಮೊದಲ ಬಾರಿಗೆ […]