ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ :ಕಾಡಂಚಿನ ಶಾಲಾ ಮಕ್ಕಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮ

ಆನೇಕಲ್ 29 : ನೂರಾರು ವರ್ಷಗಳಿಂದ ಮನುಷ್ಯ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿಯುತ್ತಲೇ ಇದೆ. ಅದರಲ್ಲೂ ಕಾಡಂಚಿನ ಪ್ರದೇಶದಲ್ಲಿ ಹಳ್ಳಿಗಳಲ್ಲಿ ಇತ್ತಿಚೆಗೆ ಅದು ಹೆಚ್ಚಾಗುತ್ತಲೇ ಇದೆ. ಇಂತಹ ಆಘಾತಕಾರಿ ಬೆಳವಣಿಗೆಯನ್ನ ಕಡಿಮೆ ಮಾಡಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ. ಕಾಡಂಚಿನ ಪ್ರದೇಶದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ವತಿಯಿಂದ ಇಂದು ಕಾಡಂಚಿನ ಪ್ರದೇಶದ ಶಾಲಾ ಮಕ್ಕಳಿಗೆ ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮವನ್ನ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆಯೋಜನೆ […]

ಆನೇಕಲ್ ಸುದ್ದಿ

ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲು

ಆನೇಕಲ್‌ : ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಆನೇಕಲ್‌ನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸನಪುರ ಗ್ರಾಮದಲ್ಲಿ ನಡೆದಿದೆ. ನದೀ(೧೩) ಹಾಗೂ ಜಾವೇದ್ (೧೨) ಮೃತ ಬಾಲಕರು. ಇಲ್ಲಿನ ಬೆಟ್ಟದಾಸನಪುರದ ತಿಮ್ಮರಾಯಸ್ವಾಮಿ ದೇವಸ್ಥಾನದ ಪಕ್ಕದಲ್ಲೇ ಇರುವ ಕ್ವಾರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಳಿಕ ಅಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹದ ಹುಡುಕಾಟ ನಡೆಸಿದರು. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್ ಸುದ್ದಿ

ಸಾಮೂಹಿಕ ಅತ್ಯಾಚಾರ, ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆನೇಕಲ್‌ನಲ್ಲಿ ಅವಡದೇನಹಳ್ಳಿ ಬಳಿ ನೇಪಾಳಿ ಮೂಲದ ಯುವತಿಯೊಬ್ಬಳ ಮೇಳೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ, ಇಲ್ಲಿನ ಪಾಳು ಬಂಗಲೇಯಲ್ಲಿ ೨೧ ವರ್ಷದ ಯುವತಿಯನ್ನ ಅರೆಪ್ರಗ್ನಾವಸ್ಥೆಯಲ್ಲಿ ನೋಡಿದ ಸ್ಥಳೀಯರು ಆಕೆಯನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರಗೆ ದಾಖಲು ಮಾಡಿದ್ದಾರೆ. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ. ಆತ್ಯಾಚಾರ ನಡೆಸಿದ ದುಷ್ಕರ್ಮಿಗಳು ನಂತರ ಆಕೆಯ ಮೇಲೆ ಹಲ್ಲೆ ಮಾಡಿ ಹೊಗಿದ್ದಾರೆ. ೩ ದಿನದಿಂದ ಪಾಳು ಬಂಗಲೆಯಲ್ಲಿ ಯುವತಿಯ ಚಿರಾಟ ಕಂಡು ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಆನೇಕಲ್ ಪೊಲೀಸರು ತನಿಖೆ ನಡೆಸುತ್ತಿದ್ದು ಆತ್ಯಾಚಾರ […]

ಆನೇಕಲ್ ಸುದ್ದಿ

೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ ವಿಧಾನ ಸಭಾ ಕ್ಷೇತ್ರದ ಆದಿಗೊಂಡನಹಳ್ಳಿ ಗ್ರಾಮದಿಂದ ಸೊಳ್ಳೆಪುರ , ಬಿಕ್ಕನಹಳ್ಳಿ ಹಾಗೂ ಕೊಟಗಾನಹಳ್ಳಿ ವರೆಗೆ ೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಾಸಕ ಶಿವಣ್ಣ ಚಾಲನೆ ನೀಡಿದರು. ಶಾಸಕರ ವಿಶೇಷ ಅನುಧಾನದಲ್ಲಿ ೪.ಕೋಟಿ ೧೪ ಲಕ್ಷ ರೂ ವೆಚ್ಚದಲ್ಲಿ ಈ ರಸ್ತೆಗೆ ಡಾಂಬರೀಕರಣಕ್ಕೆ ಇಂದು ಭೂಮಿ ಪೂಜೆ ನಡೆಸಿ ಮಾತನಾಡಿದ ಶಿವಣ್ಣ ಈ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು ಜನ ಸಮಾನ್ಯರು ಓಡಾಡಲು ತೊಂದರೆ ಅನುಭವಿಸಬೇಕಾಗಿತ್ತು, ಹೀಗಾಗಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆಗೆ ಡಾಂಬರೀಕರನ […]

ಆನೇಕಲ್ ಸುದ್ದಿ

ಆನೇಕಲ್‌ನಲ್ಲಿ ಡಿ.2 ರಂದು ಉದ್ಯೋಗ ಮೇಳ- 200 ಕಂಪನಿಗಳು ಭಾಗಿ

ಆನೇಕಲ್ 25:  ತಾಲ್ಲೂಕಿನ ನಿರೂದ್ಯೋಗಿಗಳಿಗೆ ಸಹಾಯವಾಗಲೆಂದು ಡಿಸೆಂಬರ್ 2 ರಂದು ಆನೇಕಲ್‌ನ ಸರ್ಜಾಪುರದಲ್ಲಿ ಬೃಹತ್ ಉದ್ಯೋಗ ಮೇಳವನ್ನ ನಡೆಸಲಾಗುತ್ತಿದೆ. ಆನೇಕಲ್ ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ದಿ ಮತ್ತು ವೃತ್ತಿ ನಿಗಮದ ವತಿಯಿಂದ ಉದ್ಯೋಗ ಮೇಳವನ್ನ ನಡೆಸಲಾಗುತ್ತಿದ್ದು ಸುಮಾರು 200 ಕ್ಕೂ ಹೆಚ್ಚು ಕೈಗಾರಿಕೆಗಳು ಹಾಗೂ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆನೇಕಲ್ ಶಾಸಕ ಬಿ.ಶಿವಣ್ಣ ಆನೇಕಲ್‌ನ ಮೇಳದಲ್ಲಿ ೨೦೦ ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಲಿದ್ದು 7ನೇ ತರಗತಿ […]

ಆನೇಕಲ್ ಸುದ್ದಿ

ನಕಲಿ ಬಾಬಾ- ೭ ಲಕ್ಷ ಪಂಗನಾಮ

  ಆನೇಕಲ್ : ನೀವು ದೈವ ಭಕ್ತರಾ..? ಪೂಜೆ ಪುನಸ್ಕಾರ ಅಂತ ಸಿಕ್ಕ ಸಿಕ್ಕವರನ್ನೆಲ್ಲಾ ಮನೆಗೆ ಕರೆಸಿಕೊಳ್ತಿರಾ..? ಹಾಗೆ ಮಾಡೋದಾದ್ರೆ ಇನ್ನೂ ಮುಂದೆ ಸ್ವಲ್ಪ ಜೋಪಾನವಾಗಿರಿ.. ಯಾಕಂದ್ರೆ ಪೂಜೆಯ ನೆಪ ಮಾಡಿಕೊಂಡು ನಿಮಗೆ ಮಂಕು ಬೂದಿ ಎರಚಿ ಕ್ಷಣ ಮಾತ್ರದಲ್ಲಿ ಮನೆಯನ್ನ ಗುಡಿಸಿ ಗುಂಡಾಂತರ ಮಾಡುವ ಕಳ್ಳ ಕಪಟಿ ಸ್ವಾಮಿಜೀಗಳು ಈಗ ಸಿಲಿಕಾನ್ ಸಿಟಿಯಲ್ಲಿ ಓಡಾಡಿಕೊಂಡಿದ್ದಾರೆ. ಇದೇ ರೀತಿ ಆನೇಕಲ್‌ನ ಕಿತ್ತಗಾನಹಳ್ಳಿಯಲ್ಲಿ ಪೂಜೆ ನೆಪ ಮಾಡಿಕೊಂಡು ಬರೋಬರಿ ೭ ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಹಣವನ್ನ ದೋಚಿ […]

ಆನೇಕಲ್ ಸುದ್ದಿ

ಅತ್ತಿಬೆಲೆಯಲ್ಲಿ ಸ್ವಚ್ಚ ಸರ್ವೆಕ್ಷಣ ೨೦೧೮ ಕ್ಕೆ ಚಾಲನೆ, ಜಾಗೃತಿ ಜಾಥ

ಅತ್ತಿಬೆಲೆ : ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಚ ಸರ್ವೇಕ್ಷಣ ೨೦೧೮ ಕಾರ್ಯಕ್ರಮಕ್ಕೆ ಇಂದು ಆನೇಕಲ್‌ನ ಅತ್ತಿಬೆಲೆ ಪುರಸಭೆಯಲ್ಲಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ರಾಯಬಾರಿ ಶುಭಪುಂಜ ಹಾಗೂ ಅತ್ತಿಬೆಲೆ ಸಿಪಿಐ ರಾಜೇಶ್ ಸೇರಿದಂತೆ ಪುರಸಭಾ ಸದಸ್ಯರುಗಳು ಈ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ಅಲ್ಲದೇ ನೂರಾರು ವಿದ್ಯಾರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥ ಸಹ ಹಮ್ಮಿಕೊಳ್ಳಲಾಗಿದೆ. ಕಸವನ್ನ ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಲಾಯಿತು. ಅಲ್ಲದೇ ಕಸವನ್ನ ಹಸಿ […]

ಆನೇಕಲ್ ಸುದ್ದಿ

ಕಡಲೆಕಾಯಿ ಪರಿಷೆ, ಬನ್ನಿ ಶೇಂಗಾ ತಿನ್ನಿ!

ಐತಿಹಾಸಿಕ ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಿದ್ಧವಾಗಿದೆ. ಸೋಮವಾರ ಕಡಲೆಕಾಯಿ ಪರಿಷೆಗೆ ಸಾಂಕೇತಿಕವಾಗಿ ಚಾಲನೆ ಸಿಗಲಿದೆ. ವರ್ಷಕ್ಕೊಮ್ಮೆ ಬೆಂಗಳೂರಿಗರನ್ನು ಒಂದೆಡೆ ಸೇರಿಸುವ ಹಬ್ಬವಿದಾಗಿದೆ. ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುತ್ತದೆ. ಪಾರಂಪರಿಕ ಸೊಗಡಿನೊಂದಿಗೆ ಪರಿಷೆ ನಡೆಯುತ್ತದೆ. ಲಕ್ಷಾಂಕತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಸವನಗುಡಿಯಲ್ಲಿರುವ ದೇವಾಲಯದಲ್ಲಿ ಬೃಹತ್ ನಂದಿ ವಿಗ್ರಹಕ್ಕೆ ಕಡಲೆಕಾಯಿ ಅಭಿಷೇಕ ಮಾಡುಲಾಗುತ್ತದೆ. ನಂತರ ಭಕ್ತರಿಗೆ […]

ಆನೇಕಲ್ ಸುದ್ದಿ

ಆನೇಕಲ್ ಬಸ್ ನಿಲ್ದಾಣದಲ್ಲಿ ಶೌಚಾಲಯದ ಸಮಸ್ಯೆ: ಪ್ರಯಾಣಿಕರ ಪರದಾಟ

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣ ಇದಾಗಿದ್ದು ಪ್ರತಿನಿತ್ಯ ನೂರಾರು ಬಸ್ ಗಳಲ್ಲಿ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ. ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಆನೇಕಲ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಕಳೆದ 15 ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಶೌಚಾಲಯದ ಪೈಪ್ ಒಡೆದು ಹೋಗಿದ್ದು ಅದನ್ನು ಸರಿಪಡಿಸುವ ಸಲುವಾಗಿ ಕಳೆದ 15 ದಿನಗಳಿಂದ ಬೀಗ ಜಡಿಯಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣ ಇದಾಗಿದ್ದು […]