ಪ್ರಚಲಿತ ವಿದ್ಯಮಾನ

ಬನ್ನೆರುಘಟ್ಟ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣ ,ಐವರು ಆರೋಪಿ

ಆನೇಕಲ್ ತಾಲ್ಲೂಕಿನ ಬನ್ನೆರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬನ್ನೆರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಆದರ್ಶ, ಕಾರ್ತಿಕ್, ಸುನೀಲ್, ನಂಜಪ್ಪ ಹಾಗೂ ಪವನ್ ಬಂಧಿತ ಆರೋಪಿಗಳು, ಇದೇ ತಿಂಗಳ 11 ನೇ ತಾರೀಖಿನಂದ ಬನ್ನೇರುಘಟ್ಟ ಬಳಿಯ ಮೈಲಸಂದ್ರದ ಗ್ರೀನ್ ಗಾರ್ಡನ್ ರೆಸ್ಟೋರೆಂಟ್ ಬಳಿ ಪಾರ್ಟಿ ಮಾಡಲು ಬಂದಿದ್ದ ವಿವಿ ಪುರಂ ಠಾಣೆಯ ರೌಡಿಶೀಟರ್ ನಾಗರಾಜ್‍ನನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು, ಈ ಎಲ್ಲಾ […]

ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ ಅಕ್ರಮ ಕಲ್ಲು ಗಣಿಗಾರಿಕೆ – ಕ್ರಷರ್ ಹಾಗೂ ಕ್ವಾರಿ ಮಾಲೀಕರು ಪತ್ರಿಕಾ ಗೋಷ್ಟಿ

 ಬನ್ನೇರುಘಟ್ಟ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಇಲ್ಲಿನ ಕ್ರಷರ್ ಹಾಗೂ ಕ್ವಾರಿ ಮಾಲೀಕರು ಪತ್ರಿಕಾ ಗೋಷ್ಟಿ ನಡೆಸಿದರು. ಆನೇಕಲ್ ತಾಲ್ಲೂಕಿನ ಜಿಗಣಿಯ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಂಡು ಸುದ್ದಿ ಗೊಷ್ಟಿಯಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನ ಮಾಲೀಕರು ಪ್ರಸ್ತುತಪಡಿಸಿದರು. ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ 1 ಕೀ,ಮೀ ಆಸು ಪಾಸಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುವಂತೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಲಾಗಿದೆ. ಇದಲ್ಲದೇ ಗಣಿ […]

ಪ್ರಚಲಿತ ವಿದ್ಯಮಾನ

ಚಿನ್ನದ ಪದಕ ವಿಜೇತೆಗೆ ಅಭಿನಂದನೆ ಮಹಾಪೂರ

ಆನೇಕಲ್‍: ದುಬೈನಲ್ಲಿ ನಡೆದ ಅಂತರ್ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನದ ಪದಕವನ್ನ ಪಡೆದ ಆನೇಕಲ್‍ನ ಕುಮಾರಿ ಶಾಲಿನಿಗೆ ಆನೇಕಲ್‍ನಲ್ಲಿ ಭರ್ಜರಿ ಸ್ವಾಗತವನ್ನ ಕೊರಲಾಯಿತು. ಇಲ್ಲಿನ ಸೊಲೂರು ಗ್ರಾಮದಲ್ಲಿ ವಾಸವಾಗಿದ್ದ ಗುರುಮೂರ್ತಿ ಹಾಗೂ ವನಜಾಕ್ಷಿರವರ ಮಗಳಾದ ಶಾಲಿನಿ ಇತ್ತಿಚೆಗೆ ನಡೆದ ಅಂತರ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಚಿನ್ನದ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಹೀಗಾಗಿ ತಾಲ್ಲೂಕಿನ ಹಲವು ಶಾಲಾ ಕಾಲೇಜುಗಳು ಈಕೆಗೆ ಇಂದು ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದವು. ಆನೇಕಲ್ ಪಬ್ಲಿಕ್ ಶಾಲೆ […]

ಪ್ರಚಲಿತ ವಿದ್ಯಮಾನ

ಆನೇಕಲ್‍ : ಕೇರಳ ಸಂತ್ರಸ್ಥರಿಗೆ ಕಾವೇರಿ ವಿದ್ಯಾ ಸಂಸ್ಥೆಯಿಂದ ನೆರವು

  ಆನೇಕಲ್‍; ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಇಡೀ ದೇಶವೇ ಕಂಬನಿ ಮಿಡಿದಿದೆ. ದೇಶದ ಹಲವು ಭಾಗಗಳಿಂದ ಕೇರಳ ಸಂತ್ರಸ್ಥರಿಗೆ ಪ್ರವಾಹದ ರೀತಿಯಲ್ಲಿ ದಿನ ಬಳಕೆಯ ವಸ್ತುಗಳನ್ನ ರವಾನೆ ಮಾಡಲಾಗುತ್ತಿದೆ. ಅದೇ ರೀತಿ ಆನೇಕಲ್‍ನ ಕಾವೇರಿ ವಿದ್ಯಾ ಸಂಸ್ಥೆ ವತಿಯಿಂದ ಕೇರಳದಲ್ಲಿ ನೊಂದವರ ಕುಟುಂಬಗಳಿಗೆ ನೆರವು ನೀಡಲು ಚಿಂತಿಸಿದ್ದು ಸುಮಾರು 280 ಕುಟುಂಬಗಳಿಗೆ ದಿನನಿತ್ಯಕ್ಕೆ ಅವಶ್ಯಕವಾಗಿರುವ ವಸ್ತುಗಳನ್ನ ಒಂದು ಕವರ್‍ನಲ್ಲಿ ಪ್ಯಾಕ್ ಮಾಡಿ ಕೇರಳಕ್ಕೆ ರವಾನೆ ಮಾಡಲಾಗುತ್ತಿದೆ. ಕೇರಳ ವೈನಾಡು ಗಡಿಭಾಗದಲ್ಲಿರುವ ಆದಿವಾಸಿ ಬುಡಗಟ್ಟು ತಾಂಡ್ಯಗಳಿಗೆ […]

ಪ್ರಚಲಿತ ವಿದ್ಯಮಾನ

ಮಾಜಿ ಪ್ರಧಾನಿ ವಾಜಪೇಯಿ ವಿಧಿವಶ- ಎನ್ನಾರ್ ಶಾಲೆಯಿಂದ ಸಂತಾಪ

  ದೇಶ ಕಂಡ ಅದ್ಭುತ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಅವರ ಸಜ್ಜನಿಕೆ ಹಾಗೂ ಸರಳತೆಯಿಂದ ಇಡೀ ದೇಶದ ಮನೆ ಮಾತಾಗಿದ್ದ ಅವರು ಅಗಲಿಕೆ ಇಡೀ ದೇಶಕ್ಕೆ ಒಂದು ದೊಡ್ಡ ನಷ್ಟವಾಗಿದೆ. ಹೀಗಾಗಿ ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಗೊಟ್ಟಿಗೆರೆ ಸಮೀಪವಿರುವ ಹರಿನಗರದ ಎನ್ನಾರ್ ಶಾಲೆಯ ಮಕ್ಕಳು ವಾಜಪೇಯಿ ಭಾವಚಿತ್ರದೊಂದಿಗೆ ಮೆರವಣಿಗೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಶಾಲೆಯ ವಾದ್ಯವೃಂದದೊಂದಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ […]

ಪ್ರಚಲಿತ ವಿದ್ಯಮಾನ

ರೈತರು – ಮಹಿಳೆಯರು ಸ್ವಾವಲಂಬಿಗಳಾದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ- ವಿರೇಂದ್ರ ಹೆಗಡೆ

ಆನೇಕಲ್‍ 09 : ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಗಬೇಕು.. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿ ಮಾಡಿದ್ದು ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರು ತಿಳಿಸಿದ್ದಾರೆ, ಆನೇಕಲ್‍ನ ಚಂದಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ರೈತರು ಪ್ರತಿಯೊಂದಕ್ಕೂ ಪ್ರಕೃತಿ ಮೇಲೆ ಅವಲಂಬಿತವಾಗಿದ್ದು ಅತಿವೃಷ್ಟಿ ಅನಾವೃಷ್ಟಿಗಳ ಮೂಲಕ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ರೈತರ ಅಭಿವೃದಿಗಾಗಿ ಸಾಲ ಮನ್ನಾ ಮಾಡುವ ಮೂಲಕ […]

ಪ್ರಚಲಿತ ವಿದ್ಯಮಾನ

ಆನೇಕಲ್: ಇಂದು ವಿರೇಂದ್ರ ಹೆಗಡೆಯವರಿಂದ ವಿವಿಧ ಯೋಜನೆಗಳ ಉದ್ಘಾಟನೆ

  ಗ್ರಾಮ ಕಲ್ಯಾಣ ಹಿನ್ನೆಲೆ ವಿವಿದ ಯೋಜನೆಗಳನ್ನು ಉಧ್ಘಾಟಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಪರಮ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರು ಆ.09 ಗುರುವಾರ ಆನೇಕಲ್ ನ ಚಂದಾಪುರಕ್ಕೆ ಆಗಮಿಸುತ್ತಿದ್ದಾರೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ನಿರ್ಧೇಶಕ ಆನಂದ ಸುವರ್ಣ ಅವರು ಹೇಳಿದರು. ಆನೇಕಲ್ ನ ಹಳೇ ಚಂದಾಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ 36 ವರ್ಷಗಳಿಂದ ನಾಡಿನಾದ್ಯಾಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಂಸ್ಥೆ […]

ಪ್ರಚಲಿತ ವಿದ್ಯಮಾನ

ಆನೇಕಲ್; ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗ

ಆನೇಕಲ್ 02: ಆಷಾಡ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು, 10 ಕ್ಕೂ ಹೆಚ್ಚು ವಿವಿಧ ರೀತಿಯ ಸುಮಾರು 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಸಮಾನ್ಯವಾಗಿ ಭಕ್ತರು ಯಜ್ಞಗಳ ಮೂಲಕ ದೇವತೆಗಳ ತೃಪ್ತಿಪಡಿಸುತ್ತಾರೆ. ಆದರೆ ಇಂದು ವಿಶೇಷವಾಗಿ ಪ್ರಕೃತಿಯಲ್ಲಿ ದೊರೆಯುವ ವಿಧ ವಿಧದ ಪುಷ್ಪಗಳ ಮೂಲಕ ದೇವತೆಗಳ ಅನುಗ್ರಹವನ್ನ ಪಡೆದುಕೊಳ್ಳಲಾಯಿತು. ವೇದೊಕ್ತ ಮಂತ್ರ ಪುಷ್ಪಗಳಿಂದ ಪುರೋಹಿತರು ಶ್ರೀ ತಿಮ್ಮರಾಯಸ್ವಾಮಿ ಉತ್ಸವ […]

ಪ್ರಚಲಿತ ವಿದ್ಯಮಾನ

ಆನೇಕಲ್- ಹಾಡು ಹಗಲೇ ಮನೆಯ ಬಾಗಿಲನ್ನ ಒಡೆದು ಕಳ್ಳತನ

ಆನೇಕಲ್ 02;  ಹಾಡು ಹಗಲೇ  ಮಾಡಿರುವ ಘಟನೆ ಆನೇಕಲ್ ಕಾವಲಹೊಸಹಳ್ಳಿ ಬಳಿಯ ಎಸ್,ಆರ್.ಆರ್ ಲೇಔಟ್ ಬಳಿ ನಡೆದಿದೆ. ಇಂದು ಮದ್ಯಾನ 12 ಗಂಟೆ ವೇಳೆಗೆ ಮಂಜುನಾಥ್ ರೆಡ್ಡಿ ಎಂಬುವವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಆದಾದ ಬಳಿಕ ಮನೆಯ ಬಾಗಿಲನ್ನ ಮುರಿದ ಖದೀಮರು ಮನೆಯಲ್ಲಿದ್ದ 2 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನವನ್ನ ದೋಚಿ ಪರಾರಿಯಾಗಿದ್ದಾರೆ. ಇದೇ ಲೇಔಟ್‍ನಲ್ಲಿ ಕಳೆದ 1 ತಿಂಗಳ ಹಿಂದೆಯಷ್ಟೇ ಕಳ್ಳರು ಮನೆಗಳ್ಳತನ ಮಾಡಿ ಲಕ್ಷಾಂತರ ಹಣವನ್ನ […]

ಪ್ರಚಲಿತ ವಿದ್ಯಮಾನ

ಆನೇಕಲ್; ಮಾಜಿ ಪುರಸಭಾ ಅಧ್ಯಕ್ಷ ಅಶ್ವಥ್ ನಾರಾಯಣ್ ಇನ್ನಿಲ್ಲ

ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ್ಯ ಹಾಲಿ ಸದಸ್ಯರಾದ ಎನ್.ಎಸ್ ಅಶ್ವಥ್ ನಾರಾಯಣ್ (46) ಅನಾರೋಗ್ಯ ಹಿನ್ನೆಲೆ ಸೋಮವಾರ ರಾತ್ರಿ ನಿಧನವಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಪ್ರಮುಖ ಜೆಡಿಎಸ್ ಮುಖಂಡರು ಆಗಿದ್ದ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಲ್ಲದೇ ಕೆಲ ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯಾನ ಆರೋಗ್ಯ ಏರು ಪೇರಾಗಿ ರಾತ್ರಿ ವೇಳೆಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನ ಅಗಲಿದ್ದಾರೆ. ಮೃತರ ಅಂತಿಮ ದರ್ಶನ ಪಡೆಯಲು […]