ಪ್ರಚಲಿತ ವಿದ್ಯಮಾನ

ಆನೇಕಲ್; ಮಾಜಿ ಪುರಸಭಾ ಅಧ್ಯಕ್ಷ ಅಶ್ವಥ್ ನಾರಾಯಣ್ ಇನ್ನಿಲ್ಲ

ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ್ಯ ಹಾಲಿ ಸದಸ್ಯರಾದ ಎನ್.ಎಸ್ ಅಶ್ವಥ್ ನಾರಾಯಣ್ (46) ಅನಾರೋಗ್ಯ ಹಿನ್ನೆಲೆ ಸೋಮವಾರ ರಾತ್ರಿ ನಿಧನವಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಪ್ರಮುಖ ಜೆಡಿಎಸ್ ಮುಖಂಡರು ಆಗಿದ್ದ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಲ್ಲದೇ ಕೆಲ ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯಾನ ಆರೋಗ್ಯ ಏರು ಪೇರಾಗಿ ರಾತ್ರಿ ವೇಳೆಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನ ಅಗಲಿದ್ದಾರೆ. ಮೃತರ ಅಂತಿಮ ದರ್ಶನ ಪಡೆಯಲು […]

ಪ್ರಚಲಿತ ವಿದ್ಯಮಾನ

ಅತ್ತಿಬೆಲೆ: ರಸ್ತೆ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ

ಆನೇಕಲ್‍ನ ಉಪವಿಭಾಗದ ಅತ್ತಿಬೆಲೆ ಪೊಲೀಸರು ಇಂದು ಅತ್ತಿಬೆಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನ ಹಮ್ಮಿಕೊಳ್ಳಲಾಗಿತ್ತು. ಬೆಂ. ಗ್ರಾಮಾಂತರ ಎಸ್.ಪಿ ಭೀಮಾ ಶಂಕರ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಜೊತೆಗೆ ವಾಹನ ಸವಾರರಿಗೆ ಗುಲಾಭಿ ನೀಡಿ ಸಂಚಾರಿ ನಿಯಮಗಳನ್ನ ಪಾಲಿಸುವಂತೆ ಅರಿವು ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಎಸ್ .ಪಿ ಭೀಮಾಶಂಕರ್ ಪ್ರತಿ ವರ್ಷ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ಪೊಲೀಸ್ ಇಲಾಖೆ ಮಾಡುತ್ತಿದೆ ಅದರಂತೆ ಅತ್ತಿಬೆಲೆಯಲ್ಲಿ […]

ಪ್ರಚಲಿತ ವಿದ್ಯಮಾನ

ಜಿಗಣಿ; ೧೧ ಜನ ಜೀತದಾಳುಗಳ ರಕ್ಷಣೆ

ಆನೇಕಲ್ ೧೫; ಕಳೆದ ಎರಡು ದಶಕಗಳ ಹಿಂದೆಯೆ ರಾಜ್ಯದಲ್ಲಿ ಜೀತ ಪದ್ದತಿಯನ್ನು ನಿಷೇದಿಸಿದ್ದರೂ ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಈ ಪದ್ದತಿ ಇನ್ನೂ ಜೀವಂತವಾಗಿರುವುದು ಕಂಡುಬಂದಿದೆ. ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಮಾದಪ್ಪನದೊಡ್ಡಿಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.‌ ದಿಲೀಪ್ ಎಂಬುವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ 24 ವರ್ಷಗಳಿಂದ ಎರಡು ಕುಟುಂಬಗಳು ಜೀತ ಪದ್ದತಿ ನಡೆಸಿಕೊಂಡು ಬರುತ್ತಿವೆ ಎಂದು ಹೇಳಲಾಗಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ರಾಜಪ್ಪ ಭೋವಿ ಕುಟುಂಬದವರು ಜೀತಕ್ಕಾಗಿ ದುಡಿಯುತ್ತಿದ್ದರು, ಇದನ್ನು ತಿಳಿದ ಎನ್ ಜಿ ಓ […]

ಪ್ರಚಲಿತ ವಿದ್ಯಮಾನ

ಕರೆಂಟ್ ಶಾಕ್ – 9 ವರ್ಷದ ಬಾಲಕ ಬಲಿ

ಆನೇಕಲ್ 08: ಮನೆಯ ಮುಂದೆ ಅಟವಾಡುತ್ತಿದ್ದ ವೇಳೆ ವಿದ್ಯುತ್ ಹೈಟೇಕ್ಷನ್ ವೈರ್‌ಗೆ ಕೊಲು ತಗುಲಿದ ೯ ವರ್ಷದ ಬಾಲಕ ಮೃತಪಟ್ಟ ಘಟನೆ ಆನೇಕಲ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ನಾಗ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ ..ತ್ರಿಶೂಲ್ ಮೃತಪಟ್ಟ ಬಾಲಕ …ಎಂದಿನಂತೆ ತನ್ನ ಸ್ನೇಹಿತರ ಜತೆ ಅಟವಾಡುತ್ತಿದ್ದ ತ್ರಿಶೂಲ ಮನೆ ಪಕ್ಕದ ಕಾಪೌಂಡ್ ಪಕ್ಕದಲ್ಲಿ ಹೈಟೆಕ್ಷನ್ ವೈರ್ ಹಾದುಹೊಗಿತ್ತು .. ಈ ಹೈಟೇಕ್ಷನ್ ವೈರ್ ಬಾಲಕನ ಕೈಯಲ್ಲಿದ್ದ ಕೋಲು ತಗುಲಿದೆ , ಇದರಿಂದ ಬಾಲಕನಿಗೆ ಶೇಕಡ ೮೦% ಸುಟ್ಟ […]

ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ: ಎರಡು ಸಿಂಹದ ಮರಿಗಳು ಆಕರ್ಷಣೆ.

ಬನ್ನೇರುಘಟ್ಟ 05: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಮಾಂಸಾಹಾರಿ ಸಫಾರಿಯಲ್ಲಿದ್ದ ಹೇಮಾ ಎಂಬ ಹೆಣ್ಣು ಸಿಂಹ ಎರಡು ಮರಿಗಳಿಗೆ ಜನ್ಮ ನೀಡಿದ್ದು ಎರಡು ಮರಿಗಳು ಆರೋಗ್ಯವಾಗಿದೆ. ಎರಡು  ಹೆಣ್ಣು ಮರಿಗಳು 2 ತಿಂಗಳ ಪ್ರಾಯದವಾಗಿದ್ದು ಅವುಗಳಿಗೆ ವಿಶೇಷವಾದ ಆರೈಕೆ ಮಾಡಲಾಗುತ್ತಿದೆ. ಸದ್ಯ ಇವುಗಳನ್ನ ತಾಯಿಯ ಜೊತೆ ಪ್ರತ್ಯೆಕವಾದ ಬೊನಿನಲ್ಲಿ ಇಟ್ಟು ವಿಶೇಷವಾಗಿ ನೋಡಿಕೊಳ್ಳಲಾಗುತ್ತಿದೆ. ಈಗ ಈ ಎರಡು ಮರಿಗಳ ಸೇರಿ ಒಟ್ಟು ೩೧ ಸಿಂಹಗಳು ಈಗ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದೆ. ಸದ್ಯಕ್ಕೆ ಇವುಗಳನ್ನ ಸಫಾರಿಗೆ ಬಿಡುವ ಚಿಂಥನೆ ಇಲ್ಲ. […]

ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ :ಕಾಡಂಚಿನ ಶಾಲಾ ಮಕ್ಕಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮ

ಆನೇಕಲ್ 29 : ನೂರಾರು ವರ್ಷಗಳಿಂದ ಮನುಷ್ಯ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿಯುತ್ತಲೇ ಇದೆ. ಅದರಲ್ಲೂ ಕಾಡಂಚಿನ ಪ್ರದೇಶದಲ್ಲಿ ಹಳ್ಳಿಗಳಲ್ಲಿ ಇತ್ತಿಚೆಗೆ ಅದು ಹೆಚ್ಚಾಗುತ್ತಲೇ ಇದೆ. ಇಂತಹ ಆಘಾತಕಾರಿ ಬೆಳವಣಿಗೆಯನ್ನ ಕಡಿಮೆ ಮಾಡಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ. ಕಾಡಂಚಿನ ಪ್ರದೇಶದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ವತಿಯಿಂದ ಇಂದು ಕಾಡಂಚಿನ ಪ್ರದೇಶದ ಶಾಲಾ ಮಕ್ಕಳಿಗೆ ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮವನ್ನ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆಯೋಜನೆ […]

ಪ್ರಚಲಿತ ವಿದ್ಯಮಾನ

ಸಂಘ ಸಂಸ್ಥೆಗಳು ಬಡವರ ಏಳಿಗೆಗೆ ಮುಂದಾಗಬೇಕು – ಗೃಹ ಸಚಿವ ರಾಮಲಿಂಗಾರೆಡ್ದಿ

ಇಂದು ಆನೇಕಲ್ ಹೆನ್ನಾಗರ ಗ್ರಾಮದ ಕಾಚನಾಯಕನಹಳ್ಳಿಯಲ್ಲಿ ಗ್ರಾಮೀಣ ಮಕ್ಕಳ ಜೀವನ ಅಡಿಪಾಯ ಸಂಸ್ಥೆಯ ನೂತನ ಕಚೇರಿ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಗೃಹ ಸಚಿವ ರಾಮಲಿಂಗಾರೆಡ್ದಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನೆ ಮೇಲೆತ್ತಲು ಸಂಸ್ಥೆ ಮುಂದಾಗಿದ್ದು ಇಂತಹ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಕೆಳಮಟ್ಟದಲ್ಲಿರುವವರನ್ನು ಮೇಲೆತ್ತುವ ಕೆಲಸ ಆಗಬೇಕು ಎಂದರು. ಬಮೂಲ್ ಮಾಜಿ ಅದ್ಯಕ್ಷ ಆರ್.ಕೆ. ರಮೇಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವಾಗುವಂತೆ ಈ ಸಂಸ್ಥೆಯ […]

ಆನೇಕಲ್ ಸುದ್ದಿ

ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲು

ಆನೇಕಲ್‌ : ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಆನೇಕಲ್‌ನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸನಪುರ ಗ್ರಾಮದಲ್ಲಿ ನಡೆದಿದೆ. ನದೀ(೧೩) ಹಾಗೂ ಜಾವೇದ್ (೧೨) ಮೃತ ಬಾಲಕರು. ಇಲ್ಲಿನ ಬೆಟ್ಟದಾಸನಪುರದ ತಿಮ್ಮರಾಯಸ್ವಾಮಿ ದೇವಸ್ಥಾನದ ಪಕ್ಕದಲ್ಲೇ ಇರುವ ಕ್ವಾರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಳಿಕ ಅಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹದ ಹುಡುಕಾಟ ನಡೆಸಿದರು. ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್ ಸುದ್ದಿ

ಸಾಮೂಹಿಕ ಅತ್ಯಾಚಾರ, ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆನೇಕಲ್‌ನಲ್ಲಿ ಅವಡದೇನಹಳ್ಳಿ ಬಳಿ ನೇಪಾಳಿ ಮೂಲದ ಯುವತಿಯೊಬ್ಬಳ ಮೇಳೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ, ಇಲ್ಲಿನ ಪಾಳು ಬಂಗಲೇಯಲ್ಲಿ ೨೧ ವರ್ಷದ ಯುವತಿಯನ್ನ ಅರೆಪ್ರಗ್ನಾವಸ್ಥೆಯಲ್ಲಿ ನೋಡಿದ ಸ್ಥಳೀಯರು ಆಕೆಯನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರಗೆ ದಾಖಲು ಮಾಡಿದ್ದಾರೆ. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ. ಆತ್ಯಾಚಾರ ನಡೆಸಿದ ದುಷ್ಕರ್ಮಿಗಳು ನಂತರ ಆಕೆಯ ಮೇಲೆ ಹಲ್ಲೆ ಮಾಡಿ ಹೊಗಿದ್ದಾರೆ. ೩ ದಿನದಿಂದ ಪಾಳು ಬಂಗಲೆಯಲ್ಲಿ ಯುವತಿಯ ಚಿರಾಟ ಕಂಡು ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಆನೇಕಲ್ ಪೊಲೀಸರು ತನಿಖೆ ನಡೆಸುತ್ತಿದ್ದು ಆತ್ಯಾಚಾರ […]

ಆನೇಕಲ್ ಸುದ್ದಿ

೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ ವಿಧಾನ ಸಭಾ ಕ್ಷೇತ್ರದ ಆದಿಗೊಂಡನಹಳ್ಳಿ ಗ್ರಾಮದಿಂದ ಸೊಳ್ಳೆಪುರ , ಬಿಕ್ಕನಹಳ್ಳಿ ಹಾಗೂ ಕೊಟಗಾನಹಳ್ಳಿ ವರೆಗೆ ೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಾಸಕ ಶಿವಣ್ಣ ಚಾಲನೆ ನೀಡಿದರು. ಶಾಸಕರ ವಿಶೇಷ ಅನುಧಾನದಲ್ಲಿ ೪.ಕೋಟಿ ೧೪ ಲಕ್ಷ ರೂ ವೆಚ್ಚದಲ್ಲಿ ಈ ರಸ್ತೆಗೆ ಡಾಂಬರೀಕರಣಕ್ಕೆ ಇಂದು ಭೂಮಿ ಪೂಜೆ ನಡೆಸಿ ಮಾತನಾಡಿದ ಶಿವಣ್ಣ ಈ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು ಜನ ಸಮಾನ್ಯರು ಓಡಾಡಲು ತೊಂದರೆ ಅನುಭವಿಸಬೇಕಾಗಿತ್ತು, ಹೀಗಾಗಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆಗೆ ಡಾಂಬರೀಕರನ […]