ಪ್ರಚಲಿತ ವಿದ್ಯಮಾನ

ಬನ್ನೆರುಘಟ್ಟ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣ ,ಐವರು ಆರೋಪಿ

ಆನೇಕಲ್ ತಾಲ್ಲೂಕಿನ ಬನ್ನೆರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬನ್ನೆರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಆದರ್ಶ, ಕಾರ್ತಿಕ್, ಸುನೀಲ್, ನಂಜಪ್ಪ ಹಾಗೂ ಪವನ್ ಬಂಧಿತ ಆರೋಪಿಗಳು, ಇದೇ ತಿಂಗಳ 11 ನೇ ತಾರೀಖಿನಂದ ಬನ್ನೇರುಘಟ್ಟ ಬಳಿಯ ಮೈಲಸಂದ್ರದ ಗ್ರೀನ್ ಗಾರ್ಡನ್ ರೆಸ್ಟೋರೆಂಟ್ ಬಳಿ ಪಾರ್ಟಿ ಮಾಡಲು ಬಂದಿದ್ದ ವಿವಿ ಪುರಂ ಠಾಣೆಯ ರೌಡಿಶೀಟರ್ ನಾಗರಾಜ್‍ನನ್ನ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು, ಈ ಎಲ್ಲಾ ದೃಶ್ಯಾವಳಿಗಳು ರೆಸ್ಟೋರೆಂಟ್‍ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಕೊಲೆಯಾದ 5 ದಿನದಲ್ಲೇ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನ ಬಂಧಿಸಿ ಕೊರ್ಟ್‍ಗೆ ಹಾಜರು ಪಡಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಆದರ್ಶ ಹಾಗೂ ನಾಗರಾಜ್ ನಡುವೆ ಹಳೆಯ ದ್ವೇಷ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವು ಆರೋಪಿಗಳು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗೂ ಬನ್ನೇರುಘಟ್ಟ ಪೊಲೀಸರು ಬಲೆ ಬಿಸಿದ್ದಾರೆ.

Leave a Reply

Your email address will not be published. Required fields are marked *