ಪ್ರಚಲಿತ ವಿದ್ಯಮಾನ

15 ವರ್ಷ ಪೂರೈಸಿದ ಎನ್ನಾರ್ ಶಾಲೆ, ಮಕ್ಕಳಿಂದ ಸಂಭ್ರಮಾಚರಣೆ

 

ಬೆಂಗಳೂರು ಹೊರವಲಯದ ಗೊಟ್ಟಿಗೆರೆ ಬಳಿಯಲ್ಲಿರುವ ಎನ್ನಾರ್ ಶಾಲೆ, ಕಳೆದ 15 ವರ್ಷಗಳಿಂದ ಉತ್ತಮ ಫಲಿತಾಂಶ ನೀಡುವ ಮೂಲಕ ಈ ಭಾಗದ ಪ್ರತಿಷ್ಟಿತ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಎಲ್ಲಾ ರೀತಿಯ ಉತ್ತೇಜನ ನೀಡುವ ಶಾಲೆಗೆ 15 ವರ್ಷ ಪೂರೈಸಿದ ಸಂದರ್ಭ, ಹೀಗಾಗಿ 15 ವರ್ಷಗಳ ಪರಿಶ್ರಮವನ್ನ ಮೆಲುಕು ಹಾಕುವ ನಿಟ್ಟಿನಲ್ಲಿ ನಿನ್ನೆ ಸಂಜೆ ಶಾಲಾ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. 15 ವರ್ಷಗಳಿಂದ ಶಾಲೆ ನಡೆದು ಬಂದ ಹಾದಿಯನ್ನ ಮೆಲುಕು ಹಾಕಿದ ಶಾಲಾ ಸಂಸ್ಥಾಪಕರಾದ ನಂಜಾರೆಡ್ಡಿ ಶಾಲೆಯ ಅಬಿವೃದ್ದಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಅದ್ದೂರಿ ವಾರ್ಷಿಕೊತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಮಕ್ಕಳಿಂದ ಹಲವು ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು. ಎಲ್,ಕೆ.ಜಿ ಶಾಲೆಯ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದ ಮಕ್ಕಳು ವಿವಿಧ ರೀತಿಯ ನೃತ್ಯಗಳನ್ನ ಮಾಡುವ ಮೂಲಕ ನೆರೆದಿದ್ದ ಪೋಷಕರಿಗೆ ಸಂಗೀತದ ರಸದೌತಣವನ್ನ ಉಣಬಡಿಸಿದರು. ಶಾಲೆ ದಿನದಿಂದ ದಿನಕ್ಕೆ ಉತ್ತಮ ರೀತಿಯ ಫಲಿತಾಂಶವನ್ನ ಪಡೆಯುವ ಮೂಲಕ ಜನಪ್ರಿಯತೆ ಪಡೆದಿದೆ, ಉತ್ತಮ ಶಿಕ್ಷಕ ವೃಂದ ಮಕ್ಕಳ ಅನುಕೂಲಕರವಾದ ವಾತಾವರಣವನ್ನ ನಿರ್ಮಾಣ ಮಾಡುವ ಮೂಲಕ ಕಲಿಕೆ ಆದ್ಯತೆ ನೀಡುತ್ತಿದ್ದಾರೆ. ಇದಲ್ಲದೇ ಮಕ್ಕಳಿಗೆ ಪ್ರಾಯೋಗಿಕವಾಗಿ ಹಲವು ಪರೀಕ್ಷೆಗೆ ಒಳಪಡಿಸಿ ಮಕ್ಕಳ ಅರ್ಥವಾಗುವ ರೀತಿಯಲ್ಲಿ ಪಾಠ ಪ್ರವಚನವನ್ನ ನಡೆಸಲಾಗುತ್ತಿದೆ ಎಂದು ಪ್ರಾಂಶುಪಾಲರು ತಿಳಿಸಿದರು. ಅಲ್ಲದೇ ಇದೇ ಶಾಲೆಯಲ್ಲಿ ಓದುತ್ತಾ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಮಕ್ಕಳನ್ನ ಸಹ ಇದೇ ವೇಳೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *