ಆನೇಕಲ್ ಸುದ್ದಿ

೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ ವಿಧಾನ ಸಭಾ ಕ್ಷೇತ್ರದ ಆದಿಗೊಂಡನಹಳ್ಳಿ ಗ್ರಾಮದಿಂದ ಸೊಳ್ಳೆಪುರ , ಬಿಕ್ಕನಹಳ್ಳಿ ಹಾಗೂ ಕೊಟಗಾನಹಳ್ಳಿ ವರೆಗೆ ೪ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಾಸಕ ಶಿವಣ್ಣ ಚಾಲನೆ ನೀಡಿದರು. ಶಾಸಕರ ವಿಶೇಷ ಅನುಧಾನದಲ್ಲಿ ೪.ಕೋಟಿ ೧೪ ಲಕ್ಷ ರೂ ವೆಚ್ಚದಲ್ಲಿ ಈ ರಸ್ತೆಗೆ ಡಾಂಬರೀಕರಣಕ್ಕೆ ಇಂದು ಭೂಮಿ ಪೂಜೆ ನಡೆಸಿ ಮಾತನಾಡಿದ ಶಿವಣ್ಣ ಈ ರಸ್ತೆ ಹಲವು ವರ್ಷಗಳಿಂದ ಹಾಳಾಗಿದ್ದು ಜನ ಸಮಾನ್ಯರು ಓಡಾಡಲು ತೊಂದರೆ ಅನುಭವಿಸಬೇಕಾಗಿತ್ತು, ಹೀಗಾಗಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆಗೆ ಡಾಂಬರೀಕರನ ಮಾಡಲು ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಅಲ್ಲದೇ ಗ್ರಾಮಗಳ ರಸ್ತೆಗಳ ಅಭಿವೃದ್ದಿಯಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *