ಆನೇಕಲ್ ಸುದ್ದಿ

ಸರ್ಜಾಪುರ; ಬಿಜೆಪಿಯಿಂದ ಉಚಿತ ವೃತ್ತಿಪರ ಕೌಶಲ್ಯ ತರಬೇತಿ

ಆನೇಕಲ್ 27;ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಇಂದು ಉಚಿತ ಕೌಶಲ್ಯ ತರಬೇತಿ ಶಿಭಿರ ಹಮ್ಮಿಕೊಳ್ಳಲಾಗಿತ್ತು.ಸರ್ಜಾಪುರದ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಯಾನ್ ಐಟಿ ಸಲ್ಯೂಷನ್ಸ್ ಕಂಪನಿಯಿಂದ ಕೌಶಲ್ಯ ತರಬೇತಿಗೆ ಚಾಲನೆ ನೀಡಲಾಯಿತು. ಬೆಂ.ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜ್ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕೌಶಲದ ಬಗ್ಗೆ ಮಾಹಿತಿ ಪಡೆದುಕೊಂಡರು.ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ನಲ್ಲಿ ವಿದ್ಯಾರ್ಥಿಗಳಿಗೆ ನುರಿತ ತರಬೇತಿ ನೀಡಿ ಅವರಿಗೆ ಸೂಕ್ತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಈ ಕಾರ್ಯಕ್ರಮ ನಿಜಕ್ಕೂ ಅನುಕೂಲವಾಗುತ್ತಿದೆ ಆದರಿಂದ ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಎ.ನಾರಾಯಣಸ್ವಾಮಿ ಮನವಿ ಮಾಡಿದರು

ವಿದ್ಯಾರ್ಥಿಗಳಿಗೆ ೨ ತಿಂಗಳು ತರಬೇತಿ ಹಾಗೂ ಉದ್ಯೋಗ ನೀಡುವ ಭರವಸೆ ನೀಡಲಾಗುತ್ತಿದ್ದು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಅತ್ತಿಬೆಲೆ, ಆನೇಕಲ್ ಹಾಗೂ ಚಂದಾಪುರಲ್ಲೂ ಕೌಶಲ ತರಬೇತಿ ಕಾರ್ಯಕ್ರಮ ನಡೆಲಾಗುವುದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಮುನಿರಾಜು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮಚಂದ್ರ, ಪವಿತ್ರ ಜಯಪ್ರಕಾಶ್, ತಾ.ಪಂಚಾಯತ್ ಅಧ್ಯಕ್ಷ ಮುನಿರತ್ನಮ್ಮ, ಕೆ.ಸಿ. ರಾಮಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *