ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಸರ್ಕಾರದಿಂದ ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯ- ಯುವಕರ ಉದ್ಯೊಗಕ್ಕೆ ಹೆಚ್ಚಿನ ಅದ್ಯತೆ – ರಾಮಲಿಂಗಾರೆಡ್ಡಿ

ಆನೇಕಲ್ ತಾಲ್ಲೂಕಿನ ನಿರೂದ್ಯೋಗಿಗಳಿಗೆ ಸಹಾಯವಾಗಲೆಂದು ಸರ್ಜಾಪುರದಲ್ಲಿ ಕರ್ನಾಟಕ ಕೌಶಲ ವೃತ್ತಿ ತರಬೇತಿ ನಿಗಮ ವತಿಯಿಂದ ಇಂದು ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಇಲ್ಲಿನ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜು ಆವರಣದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗೃಹ ಸಚಿವ ರಾಮಲಿಂಗಾರೆಡ್ಡಿ ಮೇಳದಲ್ಲಿ ಭಾಗವಹಿಸಿ ಆಯ್ಕೆಯಾದ ಯುವಕರಿಗೆ ನೆಮಕಾತಿ ಪತ್ರ ನೀಡಿದರು. ಈ ವೇಳೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ರಾಜ್ಯಕ್ಕೆ ಕೈಗಾರಿಕೆಗಳನ್ನು ತರುವ ಸಲುವಾಗಿ ಕೈಗಾರಿಕೆಗಳಿಗೆ ಭೂಮಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು ಇದರಿಂದ ನಿರುದ್ಯೊಗಿ ಯುವಕರಿಗೆ ಬಹಳಷ್ಟು ಉದ್ಯೊಗ ದೊರೆತಿದೆ ಎಂದರು. ಆನೇಕಲ್ ತಾಲ್ಲೂಕು ಕೈಗಾರಿಕೆಗಳ ತವರೂರಗಿದ್ದು ಸ್ಥಳಿಯ ಯುವಕ ಯುವತಿಯರಿಗೆ ಉದ್ಯೊಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೃಹತ ಉದ್ಯೊಗ ಮೇಳವನ್ನು ಆಯೊಜಿಸಿ ಸ್ಥಳದಲ್ಲೆ ಸಾವಿರಾರು ನಿರುದ್ಯೊಗಿಗಳಿಗೆ ಉದ್ಯೊಗವನ್ನು ಕಲ್ಪಿಸಿದ್ದಾರೆ, ಇಂತಹ ಉದ್ಯೊಗ ಮೇಳಗಳು ಸ್ಥಳಿಯವಾಗಿ ಆಯೋಜಿಸುವುದರಿಂದ ವಿದ್ಯಾವಂತರು ಕೆಲಸವನ್ನು ಪಡೆದು ಉತ್ತಮ ಜೀವನ್ನವನ್ನು ನಡೆಸಲು ಸಹಾಯವಾಗುತ್ತದೆ. ಎಂದು ರಾಮಲಿಂಗಾರೆಡ್ಡಿ ತಿಳಿಸಿದರು

ಬಳಿಕ ಮಾತನಾಡಿದ ಶಾಸಕ ಶಿವಣ್ಣ ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದರು ಸಾಕಷ್ಟು ವಿದ್ಯಾವಂತರು ಉದ್ಯೊಗ ವಂಚಿತರಾಗಿದ್ದಾರೆ. ಕೆಲಸಗಳಿಗೆ ಪ್ರತಿ ನಿತ್ಯ ಕಾರ್ಖಾನೆಗಳಿಗೆ ಹಲೆದಾಡುತ್ತಿದ್ದನ್ನ ನೋಡಿ ಉದ್ಯೊಗ ಮೇಳವನ್ನು ಮಾಡಭೇಕೆಂದು ಬಹುದಿನಗಳ ಕನಸು ಇತ್ತು. ಆದು ಇಂದು ನನಸಾಗಿದೆ, ನಾಲ್ಕು ಸಾವಿರ ಜನಕ್ಕು ಹೆಚ್ಚು ವಿದ್ಯಾವಂತರು ನೊಂದಣಿ ಆಗಿದು ಅದರಲ್ಲಿ ಮೂರುವರೆ ಸಾವಿರಕ್ಕು ಹೆಚ್ಚು ಜನರಿಗೆ ನೇiಕಾತಿ ಪತ್ರವನ್ನು ನೀಡಲಾಗಿದೆ ಎಂದರು.  ಒಟ್ಟಿನಲ್ಲಿ ಇಂದು ನಡೆದ ಉದ್ಯೋಗ ಮೇಳದಲ್ಲಿ ನಿಜಕ್ಕೂ ಪ್ರತಿಭಾವಂತ ಮಕ್ಕಳಿಗೆ ಅನುಕೂಲವಾಗುವ ಜೊತೆಗೆ ಹಲವು ನಿರುದ್ಯೋಗಿಗಳು ಸ್ಥಳದಲ್ಲೇ ನೆಮಕಾತಿ ಪತ್ರ ಪಡೆದು ಖುಷಿ ಪಟ್ರು.. ಮೇಳವನ್ನ ಆಯೋಜಿಸಿದ್ದ ಆಯೋಜಕರಿಗೆ ಧನ್ಯವಾದ ಸಲ್ಲಿಸಿದ್ರು..

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *