ಪ್ರಚಲಿತ ವಿದ್ಯಮಾನ

ಸಂಘ ಸಂಸ್ಥೆಗಳು ಬಡವರ ಏಳಿಗೆಗೆ ಮುಂದಾಗಬೇಕು – ಗೃಹ ಸಚಿವ ರಾಮಲಿಂಗಾರೆಡ್ದಿ

ಇಂದು ಆನೇಕಲ್ ಹೆನ್ನಾಗರ ಗ್ರಾಮದ ಕಾಚನಾಯಕನಹಳ್ಳಿಯಲ್ಲಿ ಗ್ರಾಮೀಣ ಮಕ್ಕಳ ಜೀವನ ಅಡಿಪಾಯ ಸಂಸ್ಥೆಯ ನೂತನ ಕಚೇರಿ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಗೃಹ ಸಚಿವ ರಾಮಲಿಂಗಾರೆಡ್ದಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನೆ ಮೇಲೆತ್ತಲು ಸಂಸ್ಥೆ ಮುಂದಾಗಿದ್ದು ಇಂತಹ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಕೆಳಮಟ್ಟದಲ್ಲಿರುವವರನ್ನು ಮೇಲೆತ್ತುವ ಕೆಲಸ ಆಗಬೇಕು ಎಂದರು.

ಬಮೂಲ್ ಮಾಜಿ ಅದ್ಯಕ್ಷ ಆರ್.ಕೆ. ರಮೇಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವಾಗುವಂತೆ ಈ ಸಂಸ್ಥೆಯ ಧ್ಯೆಯೋದ್ದೇಶಗಳನ್ನು ರೂಪಿಸಲಾಗಿದೆ, ಯಾವುದೇ ಬಡ ಮಕ್ಕಳಿಗೆ ಚಿಕಿತ್ಸೆಗೆ ಬೇಕಾದಲ್ಲಿ ಸಂಸ್ಥೆ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ೨೦ ಸಾವಿರ ರೂಗಳನ್ನು ನೀಡಲಿದೆ ಎಂದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್‌ಗಳನ್ನು ನೀಡಲಾಗುತ್ತಿದ್ದು, ನಮ್ಮ ಕೈಲಾದ ಸೇವೆಯನ್ನು ಬಡವರ ಏಳಿಗೆಗೆ ನೀಡೂವ ಸಂಕಲ್ಪ ಮಾಡಿದ್ದೇವೆ ಎಂದರು.

ಹೆನ್ನಾಗರ ಗ್ರಾಮ ಪಂಚಾಯತಿ ಅದ್ಯಕ್ಷ ಆರ್.ಕೆ.ಕೇಶವರೆಡ್ದಿ ಮಾತನಾಡಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿರುವುದು ಕಾಚನಾಯಕನಹಳ್ಳಿಯಲ್ಲಿ ಇಲ್ಲಿನ ಮಕ್ಕಳಿಗೆ ಖಾಸಗಿ ಶಾಲೆಯವರಿಗಿಂತ ಹೆಚ್ಚಿನ ಸೇವೆಯನ್ನು ನೀಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಸರ್ಕಾರಿ ಶಾಲೆಗೆ ನೀಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕಿಟ್ ವಿತರಣೆ, ಶಾಲಾ ಬ್ಯಾಕ್, ವಿವಿದ ಕ್ಷೇತ್ರದಲ್ಲಿ ಸಾದನೆ ಮಾಡಿದವರಿಗೆ ಧನ ಸಹಾಯ ಮತ್ತು ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ರೂಪಿಸಿದ್ದರು.

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *