ಪ್ರಚಲಿತ ವಿದ್ಯಮಾನ

ಶಾಂತಿಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಕಸ ಸಂಸ್ಕರಣ ಘಟಕ ಲೋಕಾರ್ಪಣೆ

ಆನೇಕಲ್‍  : ಪಂಚಾಯಿತಿ ವ್ಯಾಪ್ತಿಯಲ್ಲಿ ತಲೆದೋರುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಘನ ತ್ಯಾಜ್ಯ ಕಸ ಸಂಸ್ಕರಣ ಘಟಕವನ್ನ ನಿರ್ಮಾಣ ಮಾಡಿಕೊಳ್ಳುವ ಮೂಲಕ ಆನೇಕಲ್‍ನ ಶಾಂತಿಪುರ ಗ್ರಾಮ ಪಂಚಾಯಿತಿ ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ, ಇಂದು ಶಾಂತಿಪುರದ ಘನ ತ್ಯಾಜ್ಯ ಸಂಸ್ಕರಣ ಘಟಕವನ್ನ ಬೆಂ, ಗ್ರಾ, ಸಂಸದ ಡಿಕೆ ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ , ಶಾಸಕ ಬಿ.ಶಿವಣ್ಣ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು, ಪಂಚಾಯಿತಿ ಮಟ್ಟದಿಂದಲೇ ಕಸವನ್ನ ಹಸಿ ಹಾಗೂ ಒಣ ಕಸವಾಗಿ ಬೆರ್ಪಡಿಸಿ ಅವುಗಳನ್ನ ವಿಲೇವಾರಿ ಮಾಡುವುದರಿಂದ ಪರಿಸರ ಸ್ವಚ್ಚವಾಗಿರುತ್ತದೆ. ಅಲ್ಲದೇ ಇದೇ ಕಸವನ್ನ ಗೊಬ್ಬರವಾಗಿ ಪರಿವರ್ತಿಸಿ ಅದನ್ನ ಬೇರೆ ಉದ್ದೇಶಗಳಿಗೂ ಬಳಸಿಕೊಳ್ಳಬಹುದಾಗಿದೆ, ಹಾಗಾಗಿ ಪಂಚಾಯಿತಿ ವತಿಯಿಂದ ಕಸ ಸಂಸ್ಕರಣ ಘಟಕವನ್ನ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸದ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಸಂಸದ ಡಿಕೆ ಸುರೇಶ್ ಅಭಿಪ್ರಾಯಪಟ್ಟರು.

ಇದಲ್ಲದೇ ಚಿಕ್ಕನಾಗಮಂಗಲ ಗ್ರಾಮದ ಸರ್ವೆ ನಂಬರ್ 177 ರಲ್ಲಿ ಕಸ ಸಂಸ್ಕರಣ ಘಟಕಕ್ಕೆ 2 ಎಕರೆ ಹಾಗೂ ಒಳ ಚರಂಡಿ ನೀರಿನ ಶೇಖರಣೆ ತೊಟ್ಟಿ ಕಟ್ಟಲು 2 ಎಕರೆ ಜಾಗವನ್ನ ಮಂಜೂರು ಮಾಡಿಕೊಡುವ ಮೂಲಕ ನಮ್ಮ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಂತಿಪುರ ಪಂಚಾಯಿತಿ ಅಧ್ಯಕ್ಷರಾದ ಎಂ. ವೆಂಕಟೇಶ್ ತಿಳಿಸಿದರು.

Leave a Reply

Your email address will not be published. Required fields are marked *