ಪ್ರಚಲಿತ ವಿದ್ಯಮಾನ

ಶಬರಿಮಲೆ ವಿವಾದ ಕೆವಲ ರಾಜ್ಯದ ಸಮಸ್ಯೆಯಲ್ಲ ದೇಶದ ಸಮಸ್ಯೆ- ಚೈತ್ರಾ ಕುಂದಾಪುರ

ಶಬರಿಮಲೆ ವಿವಾದ ಕೆವಲ ರಾಜ್ಯದ ಸಮಸ್ಯೆಯಲ್ಲ. ದೇಶದ ಎಲ್ಲಾ ಅಯ್ಯಪ್ಪ ಭಕ್ತರಿಗೆ ಅದು ಸಮಸ್ಯೆಯಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ವಿಚಾರವಾಗಿ ಬೃಹತ್ ಹೋರಾಟ ನಡೆಸಲಾಗುತ್ತಿದ್ದು, ನಮ್ಮ ಭಾವನೆಗಳಿಗೆ ಧಕ್ಕೆಯಾಗದಂತೆ ಈ ತೀರ್ಪು ನೀಡುವಂತೆ ಸುಪ್ರೀಂ ಕೊರ್ಟ್ ಮೊರೆ ಹೋಗುವುದಾಗಿ ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬನ್ನೇರುಘಟ್ಟ ಬಳಿಯ ಅನಂತಗಿರಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸೇವ್ ಶಬರಿಮಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾರೋ ಕೆಲವರು ಮಹಿಳೆಯರು ದೇವಾಲಯ ಪ್ರವೇಶ ಮಾಡುವುದರಿಂದ ಲಕ್ಷಾಂತರ ಮಂದಿಗೆ ಮಹಿಳೆಯರ ಭಾವನೆಗಳಿಗೆ ದಕ್ಕೆಯಾಗುತ್ತಿದೆ. ರೆಹಾನಾ ಫಾತಿಮಾ ಹಾಗೂ ತೃಪ್ತಿ ದೇಸಾಯಿ ನಮಗೆ ಸಮಸ್ಯೆಯೇ ಅಲ್ಲ. ನಮಗೆ ಸುಪ್ರೀಂ ಕೊರ್ಟ್ ನಮ್ಮ ಭಾವನೆಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ . ಹಾಗಾಗಿ ನಮ್ಮ ಪರ ತೀರ್ಪು ಬರುವವರೆಗೂ ಹೋರಾಟ ನಿರಂತರ ಎಂದು ಚೈತ್ರಾ ಕುಂದಾಪುರ ತಿಳಿಸಿದರು.

Leave a Reply

Your email address will not be published. Required fields are marked *