ಪ್ರಚಲಿತ ವಿದ್ಯಮಾನ

ಲೋಕಸಭೆ ಚುನಾವಣೆ ಹಿನ್ನೆಲೆ ರೌಡಿಶೀಟರ್ ಪೆರೇಡ್

ಆನೇಕಲ್ ; ಲೋಕಸಭೆ ಚುನಾವಣೆಗೆ ಮೂಹೂರ್ತ ಫಿಕ್ಸ್ ಆದ ಹಿನ್ನೆಲೆ ಎಲ್ಲಾ ಕಡೆ ಚುನಾವಣಾ ಸಿದ್ದತೆ ಭರದಿಂದ ಸಾಗುತ್ತಿದೆ. ಇದರ ಜೊತೆ ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿಶೀಟರ್ ಪೆರೇಡ್ ಸಹ ನಡೆಸುವ ಮೂಲಕ ಪುಡಿ ರೌಡಿಗಳಿಗೆ ಎಚ್ಚರಿಕೆ ಸಹ ನೀಡಲಾಗುತ್ತಿದೆ. ಇಂದು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ಉಪ ವಿಭಾಗದ ೭ ಠಾಣೆಗಳ ವ್ಯಾಪ್ತಿಯ 180 ಕ್ಕೂ ಹೆಚ್ಚು ರೌಡಿಗಳನ್ನ ಕರೆಸಿ ವಾರ್ನಿಂಗ್ ನೀಡಲಾಯಿತು. ಬೆಂ, ಗ್ರಾಮಾಂತರ ಎಸ್.ಪಿ ರಾಮ್ ನಿವಾಸ್ ಸಪೂಟ್ ಪೆರೇಡ್ ನಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮದಲ್ಲಿ ಭಾಗಿಯಾಗದಂತೆ ಎಲ್ಲಾ ರೌಡಿಶೀಟರ್ ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಈ ವೇಳೆ ಮಾತನಾಡಿದ ಅವರು ಚುನಾವಣೆ ಪಾರದರ್ಶಕವಾಗಿ ನಡೆಯಲು ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು ಯಾವುದೇ ಚುನಾವಣಾ ಆಯೋಗದ ನಿರ್ಧೇಶನದಂತೆ ಇಂದು ರೌಡಿಗಳ ಪೆರೇಡ್ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ರೌಡಿಶೀಟರ್ ಪೆರೇಡ್ ನಡೆಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಯಾರು ಭಾಗಿಯಾಗದಂತೆ‌ ನಿಗಾ ವಹಿಸಲಾಗುವುದು ಎಂದರು. ಆನೇಕಲ್ ಉಪ ವಿಭಾಗದ ಡಿವೈಎಸ್ ಪಿ ನಂಜುಡೇಗೌಡ , ಸಿಪಿಐ
ಬಾಲಾಜಿ, ಜಗಧೀಶ್, ಮೋಹನ್ ಹಾಗೂ ಎಸ್ ಐ   ಹೇಮಂತ್, ಮುರುಳಿ, ಮಂಜುನಾಥ್ ರೆಡ್ಡಿ ಹಾಗೂ ಪ್ರೀತಂ ಗೌಡ ಸಹ ಪೆರೆಡ್‍ನಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *