ಪ್ರಚಲಿತ ವಿದ್ಯಮಾನ

ರಾಜ್ಯ ಸರ್ಕಾರದಿಂದ ಅಲ್ಪ ಸಂಖ್ಯಾತರನ್ನ ಓಲೈಸುವ ಕೆಲಸ – ಜನಾರ್ಧನ ರೆಡ್ಡಿ

ಆನೇಕಲ್‌ 05: ಕಾಂಗ್ರೇಸ್ ಸರ್ಕಾರ ಭಗವಂತನ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆನೇಕಲ್‌ನ ಸರ್ಜಾಪುರ ಬಳಿಯ ನೆರಿಗಾ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜನಾರ್ಧನ ರೆಡ್ಡಿ ಹುಣಸೂರಿನ ಹನುಮ ಜಯಂತಿ ವೇಳೆ ನಡೆದ ಗೊಂದಲಗಳಿ ರಾಜ್ಯ ಸರ್ಕಾರವೇ ಪರೋಕ್ಷ ಕಾರಣ ಎಂದು ಸರ್ಕಾರ ವಿರುದ್ದ ಕಿಡಿ ಕಾರಿದರು. ಪ್ರತಿ ವರ್ಷ ಹನುಮ ಜಯಂತಿಯಲ್ಲಿ ಭಕ್ತರು ಮಾಲಾಧಾರಿಯಾಗಿ ಉತ್ಸವ ನಡೆಸುವುದು ಹಲವು ದಶಕದಿಂದ ನಡೆದುಕೊಂಡು ಬರುತ್ತಿರುವ ಪದ್ದತಿ. ಆದರೆ ಈ ಭಕ್ತಿ ಪೂರ್ವ ಆಚರಣೆಗೆ ಅನುಮತಿ ನೀಡದೇ ಸರ್ಕಾರ ಅಲ್ಲಿನ ಭಕ್ತರಿಗೆ ತೊಂದರೆ ನೀಡಿದೆ ಎಂದರು. ಮಾತ್ರವಲ್ಲ ಚುನಾವಣೆ ಹತ್ತಿರವಿರುವ ಹಿನ್ನೆಲೆಯಲ್ಲಿ ಅಲ್ಪ ಸಂಖ್ಯಾತರನ್ನ ಓಲೈಸುವ ಕೆಲಸ ಕಾಂಗ್ರೇಸ್ ಪಕ್ಷ ಮಾಡುತ್ತಿದೆ. ಆದರೆ ಬಿಜೆಪಿ ಪಕ್ಷಕ್ಕೆ ಅದರ ಅವಶ್ಯಕತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *