ಪ್ರಚಲಿತ ವಿದ್ಯಮಾನ

ಮಾಜಿ ಪ್ರಧಾನಿ ವಾಜಪೇಯಿ ವಿಧಿವಶ- ಎನ್ನಾರ್ ಶಾಲೆಯಿಂದ ಸಂತಾಪ

 

ದೇಶ ಕಂಡ ಅದ್ಭುತ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಅವರ ಸಜ್ಜನಿಕೆ ಹಾಗೂ ಸರಳತೆಯಿಂದ ಇಡೀ ದೇಶದ ಮನೆ ಮಾತಾಗಿದ್ದ ಅವರು ಅಗಲಿಕೆ ಇಡೀ ದೇಶಕ್ಕೆ ಒಂದು ದೊಡ್ಡ ನಷ್ಟವಾಗಿದೆ. ಹೀಗಾಗಿ ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಗೊಟ್ಟಿಗೆರೆ ಸಮೀಪವಿರುವ ಹರಿನಗರದ ಎನ್ನಾರ್ ಶಾಲೆಯ ಮಕ್ಕಳು ವಾಜಪೇಯಿ ಭಾವಚಿತ್ರದೊಂದಿಗೆ ಮೆರವಣಿಗೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಶಾಲೆಯ ವಾದ್ಯವೃಂದದೊಂದಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಈ ಮೆರವಣಿಗೆಯಲ್ಲಿ ಭಾಗವಹಿಸಿದರು. ದೇಶದ ಪ್ರತಿಯೊಬ್ಬ ಮಕ್ಕಳು ವಿದ್ಯಾವಂತರಾಗಬೇಕೆಂದು ಹಂಬಲದಿಂದ ಸರ್ವ ಶಿಕ್ಷಣ ಅಭಿಯಾನವನ್ನ ಆರಂಭಿಸಿದ ವಾಜಪೇಯಿಯವರು ಕನಸಿನ ಭಾರತವನ್ನ ನಿರ್ಮಾಣ ಮಾಡಲು ಹಲವು ಕಷ್ಟಗಳನ್ನ ಎದುರಿಸಿದರು. ಇವರ ಅಮೂಲ್ಯ ಸೇವೆಯನ್ನ ಜನರಿಗೆ ತಿಳಿಸಲು ಶಾಲಾ ಆಡಳಿತ ಮಂಡಳಿ ಕಾರ್ಯಕ್ರಮವನ್ನ ಆಯೋಜಿಸಿತ್ತು.

 

 

ಇದೇ ವೇಳೆ ಮಾತನಾಡಿದ ಶಾಲೆಯ ಸಂಸ್ಥಾಪಕರಾದ ನಂಜಾರೆಡ್ಡಿ ದೇಶದ ಅಮೂಲ್ಯ ರತ್ನವನ್ನ ಕಳೆದುಕೊಂಡು ದೇಶ ಬರಿದಾಗಿದೆ. ಭಾರತ ದೇಶಕ್ಕೆ ಅವರು ಮಾಡಿರುವ ಸೇವೆಯನ್ನ ಪ್ರತಿಯೊಬ್ಬರು ನೆನೆಯಲೇ ಬೇಕು. ಅವರಿಗೆ ಗೌರವ ಸಲ್ಲಿಸುವ ನಿಟ್ಟಿಸಲ್ಲಿ ಇಂದು ರಜೆ ಇದ್ದರೂ ಸಹ ನಮ್ಮ ಶಾಲಾ ಮಕ್ಕಳು ಅವರಿಗೆ ಸಂತಾಪ ಸೂಚಿಸಲು ಆಗಮಿಸಿದ್ದಾರೆ. ಎಂದರು. ರಾಜಕಾರಣಿಗಿಂತ ಹೆಚ್ಚಾಗಿ ಅವರದ್ದ ಕಪಟವಿಲ್ಲದೇ ವ್ಯಕ್ತಿತ್ವ ಹೀಗಾಗಿ ಕೊಟ್ಯಾಂತರ ಜನರ ಹೃದಯದಲ್ಲಿ ಅವರು ಸದಾ ಹಸಿರಾಗಿರುತ್ತಾರೆ ಎಂದು ನಂಜಾರೆಡ್ಡಿ ವಾಜಪೇಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *