ಪ್ರಚಲಿತ ವಿದ್ಯಮಾನ

ಭಾರತೀಯ ಸೇನೆಗೆ ಗೌರವ ಸೂಚಿಸಲು 5 ಕೀಮೀ ಮ್ಯಾರಾಥಾನ್.

ದೇಶದ ವೀರ ಯೋಧರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ 5 ಕೀ.ಮೀ ಮ್ಯಾರಾಥಾನ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಆನೇಕಲ್‍ನ ಬುಕ್ಕಸಾಗರ ಗ್ರಾಮದ ಎಂಡ್ಯೂವರ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪೊಷಕರು ಭಾಗವಹಿಸುವ ಮೂಲಕ ಸೈನಿಕರಿಗೆ ಗೌರವ ಸೂಚಿಸಿದರು, ಸೇನೆ ಕ್ಯಾಪ್ ತೊಟ್ಟು ಹಳ್ಳಿಗಾಡಿನ ರಸ್ತೆಯಲ್ಲಿ 5 ಕೀಮೀ ಓಡುವ ಮೂಲಕ ದೇಶ ಪ್ರೇಮವನ್ನ ಬಡಿದೆಬ್ಬಿಸಿದ್ದರು. ಮಾತ್ರವಲ್ಲ ರಸ್ತೆಯ ಉದ್ದಕ್ಕೂ ಭಾರತ ಮಾತಾಕೀ ಜೈ ಘೋಷಣೆಗಳನ್ನ ಕೂಗುತ್ತಾ ಕೈಯಲ್ಲಿ ತ್ರಿವರ್ಣ ಧ್ವಜವನ್ನ ಹಿಡಿದು ಓಟ ಸಾಗಿತ್ತು, ಈ ವೇಳೆ ಮಾತನಾಡಿದ ಶಾಲಾ ಆಡಳಿತ ಮಂಡಳಿ ಈ ಮ್ಯಾರಥಾನ್‍ನಿಂದ ಬಂದ ಹಣವನ್ನ ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ಅರ್ಪಣೆ ಮಾಡುವ ಜೊತೆಗೆ ನಮ್ಮ ಅಳಿಲು ಸೇವೆಯನ್ನ ಮಾಡುತ್ತಿದ್ದೇವೆ, ನಮ್ಮ ವೀರ ಯೋಧರು ಯಾವ ರೀತಿ ನಮ್ಮ ಗಡಿಯಲ್ಲಿ ಕಷ್ಟಪಟ್ಟು ದೇಶವನ್ನ ಕಾಯುತ್ತಿದ್ದಾರೆ ಎಂಬುದನ್ನ ಪುಟ್ಟ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದ್ದು ಪ್ರತಿವರ್ಷ ಸಹ ಇದೇ ರೀತಿ ಕಾರ್ಯಕ್ರಮ ನಡೆಸಿ ಸೈನ್ಯಕ್ಕೆ ನೆರವು ನೀಡೋ ಉದ್ದೇಶ ನಮ್ಮದಾಗಿದೆ . ಹಾಗಾಗಿ ಎಲ್ಲರೂ ಈ ಕಾರ್ಯಕ್ಕೆ ಕೈ ಜೊಡಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮೇಜರ್ ಗುರುಪ್ರಸಾದ್ ನಮ್ಮ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿಯೇ ಈ ಮ್ಯಾರಥಾನ್ ಆಯೋಜಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ, ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಬೇಟಿ ನೀಡಿರುವುದು ನಿಜಕ್ಕೂ ಖುಷಿ ತಂದಿದೆ, ಇದು ರೀತಿ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆದಾಗ ಮಾತ್ರ ದೇಶದ ಸೇನಾ ವ್ಯವಸ್ಥೆಗೆ ಇನ್ನಷ್ಟು ಬಲ ದೊರಕಿದಂತಾಗುತ್ತದೆ ಎಂದರು

Leave a Reply

Your email address will not be published. Required fields are marked *