ಪ್ರಚಲಿತ ವಿದ್ಯಮಾನ

ಭಾರತದ ಮಾನುಷಿ ಚಿಲ್ಲರ್‌ ವಿಶ್ವ ಸುಂದರಿ

ಚೀನದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್‌ ವಿಶ್ವಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಇದ ರೊಂದಿಗೆ ಭಾರತದ ಐವರು ವಿಶ್ವ ಸುಂದರಿ ಪಟ್ಟಕ್ಕೇರಿದ ಹೆಗ್ಗಳಿಕೆ ಪಡೆದಂತಾಗಿದೆ. 17 ವರ್ಷಗಳ ಹಿಂದೆ 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಛೋಪ್ರಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. 20 ವರ್ಷದ ಮಾನುಷಿ ಹರ್ಯಾಣ ಮೂಲ ದವರಾಗಿದ್ದು, ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ಪೋಷಕರೂ ವೈದ್ಯರು.

ಮಾನುಷಿ ಕೂಚಿಪುಡಿ ನೃತ್ಯ ಪರಿಣಿತೆ. ಅಷ್ಟೇ ಅಲ್ಲ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ನೈರ್ಮ ಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 20 ಗ್ರಾಮಗಳಿಗೆ ಭೇಟಿ ನೀಡಿ, 5000 ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಹಿಂದೆ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್ 2017 ರಲ್ಲೂ ಮಾನುಷಿ ಗೆದ್ದಿದ್ದಳು. ಚೀನಾ ಸಾನ್ಯಾ ನಗರದಲ್ಲಿ ನಡೆದ ಸಮಾರಂಭದಲ್ಲಿ 2016ರ ಪೋಟೋì ರಿಕೋದ ಸ್ಟೆಫಾನಿ ಡೆಲ್‌ ವಾಲೆಯಿಂದ ಕಿರೀಟವನ್ನು ಮಾನುಷಿ ಮುಡಿಗೇರಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *