ಪ್ರಚಲಿತ ವಿದ್ಯಮಾನ

ಬೆಂ, ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಪ್ರಚಾರ ಆರಂಭ

ಆನೇಕಲ್: ಅಧಿಕಾರಿಗಳನ್ನ ಬೆದರಿಸಿ ದಬ್ಬಾಳಿಕೆಯಿಂದ ಕೆಲಸ ಮಾಡಿಸಿಕೊಳ್ಳುವ ಕಾಂಗ್ರೇಸ್ ಅಭ್ಯರ್ಥಿಯನ್ನ ಈ ಬಾರಿ ಜನ ತಿರಸ್ಕಾರ ಮಾಡುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬೆಂ, ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ಗೌಡ ವಾಗ್ದಾಳಿ ನಡೆಸಿದ್ದಾರೆ. ಇಂದು ಆನೇಕಲ್ ತಾಲ್ಲೂಕಿನ ಮುಗಳೂರಿನಲ್ಲಿ ಬೇಟೆ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ ಅವರು ಕಾಂಗ್ರೇಸ್ ಅಭ್ಯರ್ಥಿ ಡಿಕೆ ಸುರೇಶ್ ವಿರುದ್ದ ಕಿಡಿ ಕಾರಿದರು. ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಿಕೆ ಸುರೇಶ್‍ರವರ ಸಾಧನೆ ಶೂನ್ಯ.. ಹೀಗಾಗಿ ಈ ಬಾರಿ ಮೋದಿಯವರ ಅಭಿವೃದ್ದಿ ಕೆಲಸಗಳನ್ನ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದು ಜನ ಈ ಬಾರಿ ಬಿಜೆಪಿ ಆಶಿರ್ವಾದ ಮಾಡುವ ಮೂಲಕ ಮೋದಿಯವರ ಕೈ ಬಲಪಡಿಸುವ ವಿಶ್ವಾಸವಿದೆ ಎಂದರು.

ಇದಲ್ಲದೇ ಮುಗಳೂರು ಗ್ರಾಮದ ಹಲವು ಕಡೆ ಮತದಾರರಲ್ಲಿ ಮತಯಾಚನೆ ಮಾಡುವ ಮೂಲಕ ಬಿಜೆಪಿ ಪಕ್ಷವನ್ನ ಬಲಪಡಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಬೆಂ.ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜ್ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *