ಆನೇಕಲ್ ಸುದ್ದಿ

ಬಿಜೆಪಿ ಯುವ ಮೊರ್ಚಾದಿಂದ ೧೪ ನೇ ಸಸ್ಯ ಕಾಶಿ ಅಭಿಯಾನಕ್ಕೆ ಚಾಲನೆ

ಅನೇಕಲ್26; ಆನೇಕಲ್ ನಲ್ಲಿ ಬಿಜೆಪಿ ಯುವ ಮೊರ್ಚಾ ವತಿಯಿಂದ 14 ನೇ ವಾರದ ಸಸ್ಯಕಾಶಿ ಅಭಿಯಾನವನ್ನ ಇಂದು ಆನೇಕಲ್ ಟೌನ್ ನ ವಾರ್ಡ್ ನಂ 4 ರಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಭಾನುವಾರ ಆನೇಕಲ್ ಪ್ರತಿ ವಾರ್ಡುಗಳಲ್ಲಿ ತಲಾ 10 ಗಿಡಗಳನ್ನು ನೆಡುವ ಮೂಲಕ ಕಳೆದ 14 ವಾರದಿಂದ ಅಭಿಯಾನವನ್ನ ನಡೆಸಿಕೊಂಡು ಬರಲಾಗುತ್ತಿದೆ.

ಮನೆಗಳ ಮುಂಭಾಗದಲ್ಲಿ ಗಿಡ ಹಾಕುವ ಮೂಲಕ ಆ ಮನೆಯವರೇ ಗಿಡಕ್ಕೆ ನೀರು ಹಾಕಿ ಪೊಷಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಈ ಅಭಿಯಾನಕ್ಕೆ ಕೈ ಜೊಡಿಸುತ್ತಿದ್ದು ಇಲ್ಲಿಯವರೆಗೂ 140 ಗಿಡಗಳನ್ನ ಹಲವು ವಾರ್ಡುಗಳಲ್ಲಿ ನೆಡಲಾಗಿದೆ.

ಆನೇಕಲ್ ಟೌನ್ ಬಿಜೆಪಿ ಯುತ್ ಅಧ್ಯಕ್ಷ ಸುರೇಶ್ ನಾಯಕತ್ವದಲ್ಲಿ ಜಗದೀಶ್ ಹಾಗೂ ಲಕ್ಷೀಪತಿ ನೇತೃತ್ವದಲ್ಲಿ 14 ವಾರದಿಂದ ಗಿಡ ನೆಡುವ ಕಾರ್ಯವನ್ನ ನಡೆಸಿಕೊಂಡು ಬರಲಾಗುತ್ತಿದ್ದು ಮುರುಳಿ, ವೆಂಕಟೇಶ್, ಭರತ್ ಅರ್ಜುನ್, ಶ್ರೀರಾಮ್ ಹಾಗೂ ನರೇಂದ್ರ ಬಾಬು ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನ ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ.

ಆನೇಕಲ್ ಟೌನ್ ನಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಈ ಕಾರ್ಯಕ್ರಮವನ್ನ ನಡೆಸಲಾಗುತ್ತಿದ್ದು ಪ್ರತಿಯೊಬ್ಬರು ಈ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ನೀಡಬೇಕೆಂದು ಇವರ ಮನವಿಯಾಗಿದೆ.

Leave a Reply

Your email address will not be published. Required fields are marked *