ಆನೇಕಲ್ ಸುದ್ದಿ

ಬಿಜೆಪಿ ಮುಖಂಡರ ಆರೋಪಗಳಲ್ಲಿ ಉರುಳಿಲ್ಲ; ಶಾಸಕ ಶಿವಣ್ಣ

ಆನೇಕಲ್ ೧೫ ; ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನ ಸಹಿಸಲಾಗದೇ ತಾಲ್ಲೂಕು ಬಿಜೆಪಿ ಮುಖಂಡರು ಅಸಂಬದ್ದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆನೇಕಲ್ ಶಾಸಕ ಬಿ.ಶಿವಣ್ಣ ಹೇಳಿದ್ದಾರೆ. ಆನೇಕಲ್ ಮುತ್ತನಲ್ಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿರವರು ೧೮ ವರ್ಷಗಳಿಂದ ಮಾಡದ ಅಭಿವೃದ್ದಿ ತಾಲ್ಲೂಕಿನಲ್ಲಿ ಈಗ ಆಗಿದೆ. ಇದರಿಂದ ಬಿಜೆಪಿ ಮುಖಂಡರು ಭ್ರಮನಿರಶನಗೊಂಡು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಮಾತಿಗೆ ಜನ ಸೊಪ್ಪು ಹಾಕುವುದಿಲ್ಲ‌. ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಶಿವಣ್ಣ ಬಿಜೆಪಿ ವಿರುದ್ದ ಕಿಡಿ ಕಾರಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವರು ಫಲಾನುಭವಿಗಳಿಗೆ ಗ್ಯಾಸ್ ಸ್ವವ್ ವಿತರಣೆ ಮಾಡಿದ್ದು ವಿಶೇಷವಾಗಿತ್ತು.

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *