ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ – ಡಿಕೆ ಸುರೇಶ್ ಪ್ರಚಾರ, ರೋಡ್ ಶೋ

ಬನ್ನೇರುಘಟ್ಟ: ಬಿಜೆಪಿ ಪಕ್ಷಕ್ಕೆ ಚುನಾವಣೆ ಬಂದಾಗ ಮಾತ್ರ ರಾಮನ ನೆನಪಾಗುತ್ತದೆ. ಬಳಿಕ ರಾಮನನ್ನು ಕಾಡಿಗೆ ವಾಪಸ್ ಕಳುಹಿಸಿ ಬಿಡುತ್ತಾರೆ. ಎಂದು ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬನ್ನೇರಘಟ್ಟ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಡಿಕೆ ಸುರೇಶ್ ಬಿಜೆಪಿ ರಾಮನನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಕಟ್ಟಿದ್ದ ಅಡ್ವಾಣಿಯವರನ್ನ ಮೂಲೆ ಗುಂಪು ಮಾಡಲಾಗಿದೆ. ಬಿಜೆಪಿ ಈಗ ಮೋದಿ ಪಕ್ಷವಾಗಿ ಬದಲಾವಣೆಯಾಗಿದೆ. ಮೋದಿ ಪಕ್ಷದಲ್ಲಿ ಇರುವವರಿಗೆ ಮಾತ್ರ ಒಳ್ಳೆಯ ಸ್ಥಾನಮಾನ ಸಿಗುತ್ತಿದೆ. ಇದು ಮಿಲಿಟರಿ ರೂಲ್ ಥರ.. ಪ್ರಜಾಪ್ರಭುತ್ವ ವ್ಯವಸ್ಥೆ ಮಾಯವಾಗಿದೆ. ಬೆಂಗಳೂರಿಗೆ ಮೋದಿ ನೀಡಿದ ಕೊಡುಗೆ ಯಾವುದು ಇಲ್ಲ.. ೫ ವರ್ಷಗಳಲ್ಲಿ ಅವರ ಸಾಧನೆ ಶೂನ್ಯ ಎಂದು ಮೋದಿ ವಿರುದ್ದ ಡಿಕೆ ಸುರೇಶ್ ಕಿಡಿ ಕಾರಿದ್ದಾರೆ.
ಇದಲ್ಲದೇ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಜಿಗಣಿ, ಹರಪ್ಪನಹಳ್ಳಿ, ಹಾರಗದ್ದೆ, ಹೆನ್ನಾಗರ, ಯಾರಂಡಹಳ್ಳಿ, ಶಿಕಾರಿಪಾಳ್ಯ, ಕೊನಪ್ಪನ ಅಗ್ರಹಾರ, ಗ್ರಾಮಗಳಲ್ಲಿ ಡಿಕೆ ಸುರೇಶ್ ಅಬ್ಬರದ ಪ್ರಚಾರ ನಡೆಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶೀ ಸುಷ್ಮಾ ರಾಜಗೋಪಾಲ್ ರೆಡ್ಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಅಚ್ಯುತರಾಜ್, ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷ, ಹಿಂದುಳಿದ ವರ್ಗಗಳ ವಿಭಾಗದ ಬ್ಯಾಕ್ ಕಾಂಗ್ರೇಸ್ ಅಧ್ಯಕ್ಷ ಅಚ್ಯುತ್ ರಾಜು, ಡಿಸಿಸಿ ಕಾರ್ಯದರ್ಶಿ ಜಿಗಣಿ ಆರ್.ಪುನೀತ್, ಪುರಸಭಾ ಸದಸ್ಯ ಆನಂದ್ ಗೌಡ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಬನ್ನೇರುಘಟ್ಟ ಜಯರಾಂ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *