ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ :ಕಾಡಂಚಿನ ಶಾಲಾ ಮಕ್ಕಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮ

ಆನೇಕಲ್ 29 : ನೂರಾರು ವರ್ಷಗಳಿಂದ ಮನುಷ್ಯ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿಯುತ್ತಲೇ ಇದೆ. ಅದರಲ್ಲೂ ಕಾಡಂಚಿನ ಪ್ರದೇಶದಲ್ಲಿ ಹಳ್ಳಿಗಳಲ್ಲಿ ಇತ್ತಿಚೆಗೆ ಅದು ಹೆಚ್ಚಾಗುತ್ತಲೇ ಇದೆ. ಇಂತಹ ಆಘಾತಕಾರಿ ಬೆಳವಣಿಗೆಯನ್ನ ಕಡಿಮೆ ಮಾಡಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ. ಕಾಡಂಚಿನ ಪ್ರದೇಶದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ವತಿಯಿಂದ ಇಂದು ಕಾಡಂಚಿನ ಪ್ರದೇಶದ ಶಾಲಾ ಮಕ್ಕಳಿಗೆ ಚಿಣ್ಣರ ಮೃಗಾಲಯ ದರ್ಶನ ಕಾರ್ಯಕ್ರಮವನ್ನ ಇಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಆಯೋಜನೆ ಮಾಡಲಾಗಿತ್ತು.,

ಮರಳವಾಡಿ,ರಾಗಿಹಳ್ಳಿ, ಶಿವನಹಳ್ಳಿ, ಕನಕಪುರದ ಸರ್ಕಾರಿ ಶಾಲೆಯ ನೂರಾರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾಡಿನಲ್ಲಿ ಕಾಡು ಪ್ರಾಣಿಗಳು ಎದುರಾದಾಗ ಯಾವ ರೀತಿ ಪರಿಸ್ಥಿತಿಯನ್ನ ನಿಬಾಯಿಸಬೇಕು ಎಂಬುದನ್ನ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿಕೊಟ್ಟರು, ಅದರಲ್ಲೂ ಆನೆ , ಕರಡಿ , ಚಿರತೆಯಂಥ ವನ್ಯ ಮೃಗಗಳು ಕಾಡಿನಲ್ಲಿ ಎದುರಾದಾಗ ಮಕ್ಕಳು ಯಾವ ರೀತಿ ಅಲ್ಲಿಂದ ಬಚಾವಾಗಬೇಕು ಎಂಬುದರ ಉಪಯುಕ್ತ ಮಾಹಿತಿ ನೀಡಲಾಯಿತು.

ಮಾತ್ರವಲ್ಲ ಬನ್ನೇರುಘಟ್ಟದಲ್ಲಿ ಶಾಲಾ ಮಕ್ಕಳನ್ನ ಸಫಾರಿಗೆ ಕರೆದುಕೊಂಡು ಹೋದ ಅಧಿಕಾರಿಗಳು ಕಾಡಿನಲ್ಲಿ ಕಾಡು ಪ್ರಾಣಿಗಳ ನಡವಳಿಗೆ ಬಗ್ಗೆ ಪ್ರತ್ಯಕ್ಷವಾಗಿ ತೋರಿಸಿ ಮಾಹಿತಿ ನೀಡಲಾಯಿತು. ಕಾಡಿನಲ್ಲಿ ಹುಲಿ, ಸಿಂಹ , ಕರಡಿ, ಆನೆಯನ್ನ ನೀಡಿ ವಿದ್ಯಾರ್ಥೀಗಳು ನಿಜಕ್ಕೂ ಸಂತಸ ಹಂಚಿಕೊಂಡರು. ಆಮೂಲಕ ಅರಣ್ಯ ಹಾಗೂ ಕಾಡು ಪ್ರಾಣಿಗಳನ್ನ ಉಳಿಸಿ ಬೆಳೆಸಿಕೊಂಡು ಹೊಗುವಂತೆ ಕಿವಿ ಮಾತು ಹೇಳಲಾಯಿತು. ಈ ಕಾರ್ಯಕ್ರಮವನ್ನ ರಾಜ್ಯಾದ್ಯಂತ ಮುಂದುವರಿಸುವ ಯೋಜನೆ ಇದ್ದು ಯಾವ ರೀತಿ ಕಾರ್ಯಕ್ರಮ ಯಶ ಕಾಣುತ್ತೆ ಅನ್ನೊದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *