ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ: ಎರಡು ಸಿಂಹದ ಮರಿಗಳು ಆಕರ್ಷಣೆ.

ಬನ್ನೇರುಘಟ್ಟ 05: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಮಾಂಸಾಹಾರಿ ಸಫಾರಿಯಲ್ಲಿದ್ದ ಹೇಮಾ ಎಂಬ ಹೆಣ್ಣು ಸಿಂಹ ಎರಡು ಮರಿಗಳಿಗೆ ಜನ್ಮ ನೀಡಿದ್ದು ಎರಡು ಮರಿಗಳು ಆರೋಗ್ಯವಾಗಿದೆ. ಎರಡು  ಹೆಣ್ಣು ಮರಿಗಳು 2 ತಿಂಗಳ ಪ್ರಾಯದವಾಗಿದ್ದು ಅವುಗಳಿಗೆ ವಿಶೇಷವಾದ ಆರೈಕೆ ಮಾಡಲಾಗುತ್ತಿದೆ. ಸದ್ಯ ಇವುಗಳನ್ನ ತಾಯಿಯ ಜೊತೆ ಪ್ರತ್ಯೆಕವಾದ ಬೊನಿನಲ್ಲಿ ಇಟ್ಟು ವಿಶೇಷವಾಗಿ ನೋಡಿಕೊಳ್ಳಲಾಗುತ್ತಿದೆ. ಈಗ ಈ ಎರಡು ಮರಿಗಳ ಸೇರಿ ಒಟ್ಟು ೩೧ ಸಿಂಹಗಳು ಈಗ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದೆ. ಸದ್ಯಕ್ಕೆ ಇವುಗಳನ್ನ ಸಫಾರಿಗೆ ಬಿಡುವ ಚಿಂಥನೆ ಇಲ್ಲ. ಹಾಗಾಗಿ ಇನ್ನೂ ಕೆಲವು ತಿಂಗಳ ಕಾಲ ಅವುಗಳನ್ನ ಬೊನಿಯಲ್ಲಿ ಇಟ್ಟು ೬ ತಿಂಗಳ ಬಳಿಕ ಸಿಂಹ ಸಫಾರಿಗಳನ್ನ ಅವುಗಳನ್ನ ನೋಡಬಹುದು ಎಂದು ಇಲ್ಲಿನ ಡಿಎಫ್‌ಓ ಕುಶಾಲಪ್ಪ ತಿಳಿಸಿದರು.

Leave a Reply

Your email address will not be published. Required fields are marked *