ಪ್ರಚಲಿತ ವಿದ್ಯಮಾನ

ಬನ್ನೇರುಘಟ್ಟ ಅಕ್ರಮ ಕಲ್ಲು ಗಣಿಗಾರಿಕೆ – ಕ್ರಷರ್ ಹಾಗೂ ಕ್ವಾರಿ ಮಾಲೀಕರು ಪತ್ರಿಕಾ ಗೋಷ್ಟಿ

 ಬನ್ನೇರುಘಟ್ಟ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಇಲ್ಲಿನ ಕ್ರಷರ್ ಹಾಗೂ ಕ್ವಾರಿ ಮಾಲೀಕರು ಪತ್ರಿಕಾ ಗೋಷ್ಟಿ ನಡೆಸಿದರು. ಆನೇಕಲ್ ತಾಲ್ಲೂಕಿನ ಜಿಗಣಿಯ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಂಡು ಸುದ್ದಿ ಗೊಷ್ಟಿಯಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನ ಮಾಲೀಕರು ಪ್ರಸ್ತುತಪಡಿಸಿದರು. ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ 1 ಕೀ,ಮೀ ಆಸು ಪಾಸಿನಲ್ಲಿ ಕಲ್ಲು ಗಣಿಗಾರಿಕೆ ನಡೆಸುವಂತೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಲಾಗಿದೆ. ಇದಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೂ ಎಲ್ಲಾ ರೀತಿಯ ಪರವಾನಗಿ ಪಡೆದು ಈ ಭಾಗದಲ್ಲಿ ಕ್ರಷರ್‍ಗಳನ್ನ ನಡೆಸಲಾಗುತ್ತಿದೆ. ಇದಲ್ಲದೇ ಇತ್ತಿಚೆಗೆ ಕೆಲ ಪರಿಸರವಾದಿಗಳ ಸೋಗಿನಲ್ಲಿ ಬಂದ ಕೆಲವರು ಇಲ್ಲಿನ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸಮಾಜಿಕ ಜಾಲ ತಾಣದಲ್ಲಿ ಅಪ ಪ್ರಚಾರ ಮಾಡುವ ಮೂಲಕ ಇಲ್ಲಿನ ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ. ಹೈಕೊರ್ಟ್‍ನಲ್ಲಿ ಈಗ ಕ್ರಷರ್ ನಡೆಸುವಂತೆ ಆದೇಶ ಬಂದಿದ್ದು ಕಾನೂನು ಬದ್ದವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ, ಯಾರಿಗಾದರೂ ಈ ಬಗ್ಗೆ ಗೊಂದಲಗಳಿದ್ದರೆ, ನಮ್ಮ ಬಳಿ ಬಂದು ದಾಖಲಾತಿಗಳನ್ನ ಪರಿಶೀಲಿಸಿ ಪರಿಹರಿಸಿಕೊಳ್ಳಬಹುದು ಎಂದು ಕ್ವಾರಿ ಮಾಲೀಕರಾದ ಗೋವಿಂದರಾಜು ತಿಳಿಸಿದರು, ಬಳಿಕ ಮಾತನಾಡಿದ ವಕೀಲರು  ಕೊರ್ಟ್ ಆದೇಶದಂತೆ ಬನ್ನೇರುಘಟ್ಟ ಅರಣ್ಯ ಗಡಿರೇಖೆಯಿಂದ 1 ಕೀಮಿ ವ್ಯಾಪ್ತಿಯಲ್ಲಿ ಗಣೀಗಾರಿಕೆ ನಡೆಸಬಹುದಾಗಿದೆ. ಆದರೆ ಕೆಲವರು ಈ ಬಗ್ಗೆ ಇಲ್ಲಸಲ್ಲದ ಸುಳ್ಳು ಮಾಹಿತಿಗಳನ್ನ ನೀಡುತ್ತಿದ್ದಾರೆ, ಈ ಬಗ್ಗೆ ಎಲ್ಲಾ ದಾಖಲಾತಿ ನೀಡಲು ಸಿದ್ದ ಎಂದು ವಕೀಲ ಗಣಪತಿ ತಿಳಿಸಿದರು

Leave a Reply

Your email address will not be published. Required fields are marked *