ಸಾಮಾನ್ಯ ಸುದ್ದಿ

‘ಪದ್ಮಾವತಿ’ಗೆ ಪ್ರಮಾಣ ಪತ್ರ ನೀಡದಿರಲುಲು ತಾಂತ್ರಿಕ ಕಾರಣ ನೀಡದ ಸಿಬಿಎಫ್‌ಸಿ

padmavati movie release

ಕಳೆದ ಹಲವು ದಿನಗಳಿಂದ ಟ್ರೆಂಡಿಂಗ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ನಟನೆಯ ಪದ್ಮಾವತಿ ಚಿತ್ರದ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರಾಕರಿಸಿದ್ದು, ಅರ್ಜಿಯು ಅಪೂರ್ಣವಾಗಿದೆ ಎಂದು ಹೇಳಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ರಜಪೂತ್‌ ಸಮುದಾಯ ಈ ಚಿತ್ರದ ಬಿಡುಗಡೆ ಮಾಡದಂತೆ ಸಾಕಷ್ಟು ಒತ್ತಡ ಹೇರಿತ್ತು. ಹೀಗಾಗಿ ಚಿತ್ರವನ್ನು ಪ್ರಮಾಣಿಕರಿಸಲು ಅದರದ್ದೇ ಆದ ನಿಯಮಗಳಿದ್ದು ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಹಿತಿಗಳು ಅಸಂಪೂರ್ಣವಾಗಿದೆ ಎಂದು ತಾಂತ್ರಿಕ ಕಾರಣಗಳನ್ನು ನೀಡಿರುವ ಸಿಬಿಎಫ್‌ಸಿ ಈ ಎಲ್ಲಾ ಲೋಪಗಳನ್ನು ಪೂರ್ಣಗೊಳಿಸಿ ಮರು ಅರ್ಜಿ ಸಲ್ಲಿಸುವಂತೆ ಆದೇಶಿಸಿದೆ.

‘ಕಳೆದ ವಾರವಷ್ಟೇ ಪದ್ಮಾವತಿದ ಪ್ರಮಾಣಿಕರಣಕ್ಕೆ ಬೇಕಾದ ಅರ್ಜಿಯನ್ನು ಸಲ್ಲಿಸಲಾಗಿತ್ತು, ನಾವು ಎಲ್ಲಾ ಚಿತ್ರವನ್ನು ನೋಡುವಂತೆ ಈ ಚಿತ್ರವನ್ನೂ ಸಹ ವೀಕ್ಷಿಸಿದ್ದೇವೆ. ಆದರೆ ಅರ್ಜಿಯು ಅಸಂಪೂರ್ಣವಾಗಿದ್ದು ಈ ವಿಚಾರವನ್ನು ನಿರ್ಮಾಪಕರಿಗೂ ಹೇಳಿದ್ದೇವೆ’ ಎಂದು ಸಿಬಿಎಫ್‌ಸಿ ಮೂಲಗಳು ತಿಳಿಸಿವೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕ ಡಿ.1 ಕ್ಕೆ ನಿಗದಿಯಾಗಿದ್ದು, ಬಿಡುಗಡೆ ವಿರೋಧಿಸಿ ರಜಪೂತ ಸಂಘಟನೆಗಳು ಸಾಕಷ್ಟು ವಿರೋಧಗಳನ್ನು ಮಾಡುತ್ತಲೇ ಬಂದಿವೆ.

Leave a Reply

Your email address will not be published. Required fields are marked *