ಪ್ರಚಲಿತ ವಿದ್ಯಮಾನ

ನಕಲಿ ಪೊಲೀಸ್ ಗ್ಯಾಂಗ್ ಸೆರೆ

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಮವಸ್ತ್ರ ಧರಿಸಿ ನಕಲಿ ಲಾಠಿ ಪಿಸ್ತೂಲು ಹಿಡಿದು ನಗರದ ಹೊರ ವಲಯ ಹಾಗೂ ನೈಸ್ ರಸ್ತೆಯ ಸುತ್ತಮುತ್ತ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ಜೀಪ್‌ನಲ್ಲಿ ಸಂಚರಿಸುತ್ತ ವಿಶೇಷ ಪೊಲೀಸ್ ತಂಡವೆಂದು ಹೇಳಿಕೊಂಡು ಸಾರ್ವಜನಿಕರು, ಪ್ರೇಮಿಗಳನ್ನು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಮವಸ್ತ್ರ, ಬೆಲ್ಟ್ ಕ್ಯಾಪ್ ಧರಿಸಿ ಲಾಠಿ ಹಿಡಿದು ನಕಲಿ ಪಿಸ್ತೂಲನ್ನು ಬೆಲ್ಟ್‌ಗೆ ಸಿಗಿಸಿಕೊಂಡಿದ್ದ. ಕನಕಪುರದ ನರಸಿಂಹಯ್ಯನ ದೊಡ್ಡಿಯ ರಘು (34), ಸಫಾರಿ ಉಡುಪಿನಲ್ಲಿದ್ದ ತಮ್ಮನಾಯಕನಹಳ್ಳಿಯ ದೊಡ್ಡಯ್ಯ (48), ಆನೇಕಲ್‌ನ ರಾಯಲ್ ಹೈಸ್ಕೂಲ್‌ನ ಶಿಕ್ಷಕ ತಮಿಳುನಾಡು ಮೂಲದ ಹರೀಶ (31) ಬಂಧಿತ ಆರೋಪಿಗಳಾಗಿದ್ದು, ಇವರ ಗ್ಯಾಂಗ್‌ನಲ್ಲಿದ್ದು ತಲೆಮರೆಸಿಕೊಂಡಿರುವ ಇನ್ನು ಮೂವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದರು.
ಬಂಧಿತ ಗ್ಯಾಂಗ್‌ನಿಂದ 19 ಲಕ್ಷ 51 ಸಾವಿರ ಮೌಲ್ಯದ 500 ಗ್ರಾಂ ಚಿನ್ನಾಭರಣಗಳು, 3 ಲಕ್ಷ 99 ಸಾವಿರ ನಗದು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಪೊಲೀಸ್ ಸ್ಟಿಕ್ಕರ್ ಹಾಗೂ ಸರ್ಕಾರಿ ಜೀಪ್‌ಗೆ ಅಳವಡಿಸುವ ಜಿ ಅಕ್ಷರವುಳ್ಳ ನಂಬರ್ ಪ್ಲೇಟ್ ಅಳವಡಿಸಿದ್ದ ಬೋಲೆರೊ ಜೀಪ್, ಇನ್ನೋವಾ ಕಾರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಮವಸ್ತ್ರ, ನಕಲಿ ನಂಬರ್ ಪ್ಲೇಟ್‌ಗಳು, ಪೊಲೀಸ್ ಎಂದು ಬರೆದಿರುವ ಸ್ಟಿಕ್ಕರ್‌ಗಳು, ನಕಲಿ ಪಿಸ್ತೂಲ್ ಹಾಗೂ ಡಿಬಿಬಿಎಲ್ ಆಯುಧವನ್ನು ಜಪ್ತಿ ಮಾಡಲಾಗಿದೆ.
14 ಕಡೆ ಸುಲಿಗೆ
ಗ್ಯಾಂಗ್‌ನ ಬಂಧನದಿಂದ ಹುಳಿಮಾವು 3, ಗಿರಿನಗರದ 2, ತಲಘಟ್ಟಪುರ, ಕೆಂಗೇರಿ, ರಾಜರಾಜೇಶ್ವರಿ ನಗರ, ಎಲೆಕ್ಟ್ರಾನಿಕ್ ಸಿಟಿ, ಕಗ್ಗಲಿಪುರ, ಹಾರೋಹಳ್ಳಿ, ಬಿಡದಿ, ಕುಂಬಳಗೋಡುವಿನ ತಲಾ ಒಂದು ಸೇರಿ 14 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ರಘು ಮೊದಲು ರಾಮನಗರದ ಆರ್‌ಟಿಒ ಕಚೇರಿಯಲ್ಲಿ ಹೋಂ ಗಾರ್ಡ್ ಆಗಿ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಪೊಲೀಸರ ಕಾರ್ಯವೈಖರಿಯನ್ನು ತಿಳಿದುಕೊಂಡಿದ್ದನು. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಆತ, ಸುಲಭವಾಗಿ ಹಣ ಗಳಿಸಲು ಪೊಲೀಸ್ ತಂಡದ ಸೋಗಿನಲ್ಲಿ ಸುಲಿಗೆ ಮಾಡಲು ಯೋಜನೆ ಹಾಕಿಕೊಂಡು ಮುತ್ತೊಟ್‌ನಲ್ಲಿ ಕೆಲಸ ಬಿಟ್ಟು ಕಾಲ ಕಳೆಯುತ್ತಿದ್ದ. ದೊಡ್ಡಯ್ಯನನ್ನು ಪರಿಚಯಿಸಿಕೊಂಡಿದ್ದನು.
ಆತನಿಗೆ ಸಹಾಯಕನಂತೆ ಕಾಣಿಸಲು ಸಫಾರಿ ಹೊಲಿಸಿಕೊಟ್ಟಿದ್ದ. ಹೊರರಾಜ್ಯದವರನ್ನು ಸುಲಿಗೆ ಮಾಡಲು
ಇಂಗ್ಲಿಷ್ ಸರಿಯಾಗಿ ಬಾರದ ಕಾರಣಕ್ಕೆ ಶಿಕ್ಷಕನಾಗಿದ್ದ ದೊಡ್ಡಯ್ಯನ್ನು ತಮ್ಮ ಗ್ಯಾಂಗ್‌ಗೆ ಸೇರಿಸಿಕೊಂಡು ಗ್ಯಾಂಗ್ ಕಟ್ಟಿಕೊಂ‌ಡಿದ್ದನು.
ದೊಡ್ಡಯ್ಯನ ಹೆಸರಿನಲ್ಲಿ ಜೀಪ್‌ನ್ನು 2 ಲಕ್ಷ ಮುಂಗಡ ಕೊಟ್ಟು ಖರೀದಿಸಿದ್ದರು. ಅದಕ್ಕೆ ಜೀ ನಂಬರಿನ ನಕಲಿ ನಂಬರ್ ಪ್ಲೇಟ್‌ ಹಾಕಿಕೊಂಡು ಪೊಲೀಸ್ ಸ್ಟಿಕ್ಕರ್ ಅಂಟಿಸಿ ವಾರಾಂತ್ಯದಲ್ಲಿ ರಾತ್ರಿ ವೇಳೆ ಸುಲಿಗೆಗಿಳಿದಿದ್ದರು.
ಪ್ರೇಮಿಗಳೇ ಟಾರ್ಗೆಟ್
ಹೊರ ವಲಯದ ಪ್ರದೇಶಗಳಲ್ಲಿ ವಾರಾಂತ್ಯದ ವೇಳೆ ಸುತ್ತಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ರಘು ದಾಳಿಗೆ ಮುಂದಾದರೆ. ಸಫಾರಿ ಧರಿಸುತ್ತಿದ್ದ ದೊಡ್ಡಯ್ಯ ಸಹಚರನಾಗುತ್ತಿದ್ದ ಹೊರ ರಾಜ್ಯದ ಪ್ರೇಮಿಗಳಿಗೆ ಹರೀಶ ಇಂಗ್ಲಿಷ್‌ನಲ್ಲಿ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದನು.
ಆರೋಪಿ ರಘು ಚನ್ನಪಟ್ಟಣದಲ್ಲಿ ಪೊಲೀಸರ ಸಮವಸ್ತ್ರ ಹೊಲಿಯುತ್ತಿದ್ದ ಟೈಲರ್ ಬಳಿ ಹೋಗಿ ನಾವು ರೌಡಿ ನಿಗ್ರಹ ದಳದ ತಂಡದವರೆಂದು ಹೇಳಿಕೊಂಡು ನಮ್ಮ ಎಸಿಪಿಗೆ ಅರ್ಜೆಂಟಾಗಿ ಸಮವಸ್ತ್ರ  ಬೇಕಾಗಿದೆ ಎಂದು ಹೇಳಿ ಹೊಲಿಸಿಕೊಂಡಿದ್ದರು.
ಅದೇ ರೀತಿ ತುಮಕೂರಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಭದ್ರತೆಗೆ ಬಂದಿದ್ದು, ಜೀ ನಂಬರಿನ ನಂಬರ್ ಪ್ಲೇಟ್‌ನ್ನು ಅಲ್ಲಿನ ಅಂಗಡಿಯೊಂದರಲ್ಲಿ ಕೆಲವೇ ನಿಮಿಷಗಳಲ್ಲಿ ಮಾಡಿಸಿಕೊಂಡಿದ್ದರು.
ರೌಡಿ ನಿಗ್ರಹ ದಳ
ಕಳೆದ ಒಂದು ತಿಂಗಳಿನಿಂದ ಆರೋಪಿಗಳು ವಿಶೇಷ ಪೊಲೀಸ್ ತಂಡದ ಹೆಸರಿನಿಲ್ಲಿ ಸುಲಿಗೆಗಿಳಿದಿದ್ದು, ಈ ಗ್ಯಾಂಗ್ ಮಾಡಿರುವ ಕೃತ್ಯದ ಸಂಬಂಧ 5 ದೂರುಗಳು ಬಂದಿವೆ. ಉಳಿದವರು ಪೊಲೀಸ್ ತಂಡವೆಂದುಕೊಂಡು ಸುಮ್ಮನಾಗಿರುವ ಸಾಧ್ಯತೆ ಇದೆ. ಆದರೂ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಲಾಗುವುದೆಂದು ತಿಳಿಸಿದರು.
ಆರೋಪಿಗಳು ಹೊರ ವಲಯದ ನೈಸ್ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಹೊರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸುಲಿಗೆಯಲ್ಲಿ ತೊಡಗಿದ್ದರು. ಸಾರ್ವಜನಿಕರು ಪೊಲೀಸರೆಂದು ತಿಳಿದುಕೊಂಡು ತಮ್ಮ ಬಗ್ಗೆ ಅನುಮಾನ ಬರುವುದಾಗಲಿ, ಪ್ರಶ್ನೆ ಮಾಡುವುದಿಲ್ಲ ಎಂದು ಇದಲ್ಲದೆ ಠಾಣೆಗೆ ಹೋಗಿ ದೂರು ಕೊಡಲು ಹೆದರುತ್ತಾರೆ ಎಂಬ ಉದ್ದೇಶದಿಂದ ರಘು ಪೊಲೀಸರ ವೇಷದಲ್ಲಿ ಗ್ಯಾಂಗ್‌ ಕಟ್ಟಿಕೊಂಡು ಕೃತ್ಯಕ್ಕಿಳಿದಿದ್ದ ಎಂದು ತಿಳಿಸಿದರು.
ಗ್ಯಾಂಗ್‌ನ್ನು ಪತ್ತೆ ಹಚ್ಚಿದ ಎಸಿಪಿ ಕಾಂತರಾಜ್, ತಲಘಟ್ಟಪುರ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್‌ಕುಮಾರ್ ನೇತೃತ್ವದ ತಂಡವನ್ನು ಮಾಲಿನಿ ಕೃಷ್ಣಮೂರ್ತಿಯವರು ಅಭಿನಂದಿಸಿದರು. ಡಿಸಿಪಿ ಡಾ. ಎಸ್.ಡಿ ಶರಣಪ್ಪ ಅವರಿದ್ದರು.

ಬಾಕ್ಸ್
* ಪಿಎಸ್‌ಐ ಸಮವಸ್ತ್ರದಲ್ಲಿ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ.
* ನಗರದ ಹೊರ ವಲಯದಲ್ಲಿ ನಡೆದಿದ್ದ 14 ಸುಲಿಗೆ ಪತ್ತೆ.
* ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಗ್ಯಾಂಗ್.
* ಚನ್ನಪಟ್ಟಣದಲ್ಲಿ ಸಮವಸ್ತ್ರ, ತುಮಕೂರಿನಲ್ಲಿ ನಂಬರ್ ಪ್ಲೇಟ್.
* ರೌಡಿ ನಿಗ್ರಹ ದಳದ ಹೆಸರಲ್ಲಿ ಕೃತ್ಯ.

ಬಾಕ್ಸ್ 1
ಆರೋಪಿಗಳು ಪೊಲೀಸ್ ಹಾಗೂ ರೌಡಿನಿಗ್ರಹ ದಳದ ತಂಡವೆಂದು ಹೇಳಿಕೊಂಡು ಪ್ರೇಮಿಗಳು, ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದು, ಇಲ್ಲಿಯವರೆಗೆ ಇವರ ವಿರುದ್ಧ 5 ದೂರುಗಳು ದಾಖಲಾಗಿವೆ. ಸುಲಭವಾಗಿ ಹಣಗಳಿಸಲು ಕಳೆದ 1 ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
ಡಾ. ಎಸ್.ಡಿ ಶರಣಪ್ಪ ಡಿಸಿಪಿ ದಕ್ಷಿಣ

Leave a Reply

Your email address will not be published. Required fields are marked *