ಪ್ರಚಲಿತ ವಿದ್ಯಮಾನ

ದೊಡ್ಡ ಕಮ್ಮನಹಳ್ಳಿ ಅದ್ದೂರಿ ಬ್ರಹ್ಮ ರಥೋತ್ಸವ

ಬೆಂಗಳೂರು ; ಹುಳಿಮಾವು ಬಳಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಇಂದು ಮಾರಮ್ಮ,ಅಣ್ಣಮ್ಮ ಮಹೇಶ್ವರಮ್ಮ ದೇವಿ ಮಹಾ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು, ವೈಭವದ ರಥೋತ್ಸವಕ್ಕೆ ಸುತ್ತಮುತ್ತಲ ಸಾವಿರಾರು ಜನ ಸಾಕ್ಷಿಯಾಗಿದ್ದರು, ಬೆಳ್ಳಗೆ 11.30 ಕ್ಕೆ ತೇರಿಗೆ ಕಳಸ ಪ್ರತಿಷ್ಟಾಪನೆ ಮಾಡಿದ ಭಕ್ತರು ಬಳಿಕ ಮಾರಮ್ಮ ದೇವಿಯ ಮೂರ್ತಿಯನ್ನ ತೇರಿನಲ್ಲಿ ಇಟ್ಟು ಭಕ್ತಿಭಾವದಿಂದ ತೆರನ್ನ ಎಳೆದರು. ರಥೋತ್ಸವ ಹಿನ್ನೆಲೆಯಲ್ಲಿ ಆಧಿಶಕ್ತಿ ಮಠದ ಪಿಠಾಧೀಶರಾದ ಪರಮಾನಂದಪುರಿ ಮಹಾ ಸ್ವಾಮಿಗಳು ದಿವ್ಯ ಸಾನಿದ್ಯವನ್ನ ವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ದವನ ಚುಚ್ಚಿದ ಬಾಳೆಹಣ್ಣನ್ನ ರಥಕ್ಕೆ ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡಿದರು, ರಥೋತ್ಸವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೂ ಅನ್ನದಾಸೋಹವನ್ನ ದೇವಾಲಯದ ಆಡಳಿತ ಮಂಡಳಿಯವರು ಆಯೋಜನೆ ಮಾಡಿದರು. ದೇವರಲ್ಲಿ ಭಕ್ತಿಯಿಂದ ಏನೇ ಇಷ್ಟಾರ್ಥಗಳನ್ನ ಬೇಡಿಕೊಂಡರು ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಹೀಗಾಗಿ ಸಾವಿರಾರು ಮಂದಿ ದೇವರ ರಥವನ್ನ ಎಳೆದು ಪುನೀತರಾದರು. ಇನ್ನೂ ರಥೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೋಮ , ಹವನಗಳನ್ನ ಮಾಡುವ ಮೂಲಕ ಈ ಬಾರಿ ಉತ್ತಮ ಮಳೆ ಬೆಳೆಯಾಗಿ ನಾಡಿನ ಜನ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ದೇವರಲ್ಲಿ ಮನಸಾರೆ ಪ್ರಾರ್ಥಿಸಲಾಯಿತು. ಇನ್ನೂ ರಥೋತ್ಸವದಲ್ಲಿ ಕಮ್ಮನಹಳ್ಳಿ ಶ್ರೀನಿವಾಸ್, ಮಂಜು, ಸೋಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *