ಪ್ರಚಲಿತ ವಿದ್ಯಮಾನ

ಡಾ.ವಿಷ್ಣುವರ್ಧನ್ ಪರ ನಿಂತ ರಾಕಿಂಗ್ ಸ್ಟಾರ್ ಯಶ್

‘ರಾಕಿಂಗ್ ಸ್ಟಾರ್’ ಯಶ್… ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟರ ಲಿಸ್ಟ್ ನಲ್ಲಿರುವ ಕಲಾವಿದ. ಯುವ ಕಲಾವಿದರಿಗೆ ಸಾಥ್ ನೀಡುತ್ತಾ ವಿಭಿನ್ನ ಸಿನಿಮಾಗಳಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಸಹಾಯ ಮಾಡುತ್ತಾ ಬೆಳೆಯುತ್ತಿರುವ ನಟ. ಚಿತ್ರರಂಗದಲ್ಲಿ ಮಾತ್ರವಲ್ಲದೆ ನಾಡಿನ ರೈತರಿಗೆ ಹಾಗೂ ಪರಿಸರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿರುವ ಯಶ್, ವಿಷ್ಣುವರ್ಧನ್ ರ ಸ್ಮಾರಕ ವಿಚಾರವಾಗಿ ಮಾತನಾಡಿದ್ದಾರೆ. ‘ರಾಮಾಚಾರಿ’ ಸಿನಿಮಾದಲ್ಲಿ ವಿಷ್ಣುದಾದರ ಅಭಿಮಾನಿಯಾಗಿದ್ದ ‘ರಾಕಿಂಗ್ ಸ್ಟಾರ್’ ಇಂದು ಸ್ಟೇಜ್ ಮೇಲೆ ನಿಂತು ‘ಸಾಹಸ ಸಿಂಹ’ನಿಗೆ ಸಿಗಬೇಕಾದ ಗೌರವ ಸಿಗಲಿ ಎಂದಿದ್ದಾರೆ. ಮುಂದೆ ಓದಿರಿ….

ಸ್ಮಾರಕದ ವಿಚಾರ ಮಾತನಾಡಿದ ಯಶ್ ಅನಿರುದ್ಧ್ ಅಭಿನಯದ ‘ರಾಜಸಿಂಹ’ ಸಿನಿಮಾದ ಆಡಿಯೋ ರಿಲೀಸ್ ಇತ್ತೀಚೆಗಷ್ಟೇ ನಡೆದಿದೆ. ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾದ ‘ರಾಕಿಂಗ್ ಸ್ಟಾರ್’ ಯಶ್, ”ವಿಷ್ಣುದಾದಾ’ರಿಗೆ ಸಿಗಬೇಕಾದ ಗೌರವ ಸಿಗಬೇಕು. ಆ ಗೌರವ ಬೇಗ ಸಿಗಲಿ. ಇಲ್ಲವಾದಲ್ಲಿ ಅಭಿಮಾನಿಗಳಾದ ನಾವೇ ಆ ಗೌರವ ಸಿಗುವಂತೆ ಮಾಡುತ್ತೇವೆ” ಎಂದಿದ್ದಾರೆ.
‘ವಿಷ್ಣುವರ್ಧನ್’ ಅಭಿಮಾನಿಯಾದ ಯಶ್ ಆಡಿಯೋ ಬಿಡುಗಡೆ ಮಾಡಿದ ನಂತರ ಮಾತನಾಡಿದ ಯಶ್, ವಿಷ್ಣುವರ್ಧನ್ ಸ್ಮಾರಕ ವಿಚಾರ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಅವಕಾಶ ಸಿಕ್ಕಿದೆ ‘ಸರ್ಕಾರ’ ಈ ಬಗ್ಗೆ ಆದಷ್ಟು ಬೇಗ ಗಮನ ಹರಿಸಬೇಕಾಗಿ ಮನವಿ ಮಾಡಿದ್ದಾರೆ. ಮೈಸೂರಿನ ಸ್ಥಳಕ್ಕೂ ಇದೆ ತಕರಾರು ಬೆಂಗಳೂರಿನಲ್ಲಿ ಸ್ಥಳಕ್ಕಾಗಿ ಕಾದು ಕಾದು ಸಾಕಾಗಿದೆ. ‘ವಿಷ್ಣುವರ್ಧನ್’ ಕುಟುಂಬಸ್ಥರು ನಮಗೆ ಮೈಸೂರಿನಲ್ಲಿ ಸ್ಥಳ ನೀಡಿ ಎಂದು ಸರ್ಕಾರವನ್ನ ಮನವಿ ಮಾಡಿದರು. ಸರ್ಕಾರ ಅದರಂತೆ ಮೈಸೂರಿನಲ್ಲಿ ಸ್ಥಳ ತೋರಿಸಿತು. ಆದ್ರೆ ಆ ಸ್ಥಳವನ್ನ ರೈತರು ಬಿಟ್ಟುಕೊಡಲು ಹಿಂಜರಿಯುತ್ತಿರುವುದರಿಂದ ಇನ್ನೂ ವಿಷ್ಣು ಸಮಾಧಿಗೆ ಸ್ಥಳವೇ ನಿಗದಿ ಆಗಿಲ್ಲ. ತಾವೇ ಸ್ಮಾರಕ ಕಟ್ಟಲು ಸಿದ್ದತೆ ಇನ್ನೂ ಬೆಂಗಳೂರಿನಲ್ಲಿರುವ ‘ವಿಷ್ಣು’ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸಮಾಧಿ ಸ್ಥಳಾಂತರ ಮಾಡಲು ಬಿಡೋದಿಲ್ಲ. ಸದ್ಯ ಇರುವ ಸ್ಥಳಕ್ಕೆ ಹಣ ನೀಡಿ ಖರೀದಿ ಮಾಡಿ ಇಲ್ಲೇ ಸ್ಮಾರಕ ಮಾಡಿಕೊಳ್ಳುತ್ತೇವೆ ಅಂತಾರೆ ಅಭಿಮಾನಿಗಳು

Leave a Reply

Your email address will not be published. Required fields are marked *