ಪ್ರಚಲಿತ ವಿದ್ಯಮಾನ

ಟ್ರಂಪ್‌-ಮೆಲಾನಿಯಾ ಮದುವೆ ಕೇಕ್‌ ಹರಾಜಿಗೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ 2005ರಲ್ಲಿ ಮದುವೆಯಾದರು.ಜೋಡಿ ಕುರಿತು ಆಗಾಗ ಚರ್ಚೆಗಳು ಏಳುತ್ತವೆ. ಈಗ ಇವರ ಮದುವೆಯ ನೆನೆಪಿನ ಕೇಕನ್ನು ಹರಾಜಿಗೆ ಇಡಲಾಗಿದೆ. 1,250 (81,000 ರೂ.) ಡಾಲರ್‌ಗೆ ಸದ್ಯದ ಬಿಡ್‌ ನಿಂತಿದೆ. ಈ ಕೇಕ್‌ 1,000 ಡಾಲರ್‌ನಿಂದ 2,000 ಮೊತ್ತದವರೆಗೆ ಹರಾಜಾಗುವ ಅಂದಾಜು ಮಾಡಿದ್ದಾರೆ.

ಹರಾಜುದಾರರಾದ ಲಾಸ್‌ ಏಂಜಲೀಸ್‌ನ ಜ್ಯೂಲಿಯನ್ಸ್‌ ಆಕ್ಷನ್‌ ಹೌಸ್‌. ಟ್ರಂಪ್‌ ಮತ್ತು ಮಲಾನಿಯಾ ಮದುವೆಯಲ್ಲಿ ಹಲವಾರು ಬೆಲೆಬಾಳುವ ಕೇಕುಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು. ಈಗ ಹರಾಜಿಗಿಸಿರುವ ಕೇಕ್‌ ಬೆಲೆ 50,000(32.47 ಲಕ್ಷ ರೂ.) ಡಾಲರ್‌ ಬೆಲೆಯದ್ದು.
ಇದು 7 ಪದರಗಳ ಆಕರ್ಷಕ ಕೇಕ್‌ ಆಗಿದೆ.

 

Leave a Reply

Your email address will not be published. Required fields are marked *