ಪ್ರಚಲಿತ ವಿದ್ಯಮಾನ

ಜಿಗಣಿ; ೧೧ ಜನ ಜೀತದಾಳುಗಳ ರಕ್ಷಣೆ

ಆನೇಕಲ್ ೧೫; ಕಳೆದ ಎರಡು ದಶಕಗಳ ಹಿಂದೆಯೆ ರಾಜ್ಯದಲ್ಲಿ ಜೀತ ಪದ್ದತಿಯನ್ನು ನಿಷೇದಿಸಿದ್ದರೂ ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಈ ಪದ್ದತಿ ಇನ್ನೂ ಜೀವಂತವಾಗಿರುವುದು ಕಂಡುಬಂದಿದೆ. ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಮಾದಪ್ಪನದೊಡ್ಡಿಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.‌ ದಿಲೀಪ್ ಎಂಬುವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ 24 ವರ್ಷಗಳಿಂದ ಎರಡು ಕುಟುಂಬಗಳು ಜೀತ ಪದ್ದತಿ ನಡೆಸಿಕೊಂಡು ಬರುತ್ತಿವೆ ಎಂದು ಹೇಳಲಾಗಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ರಾಜಪ್ಪ ಭೋವಿ ಕುಟುಂಬದವರು ಜೀತಕ್ಕಾಗಿ ದುಡಿಯುತ್ತಿದ್ದರು, ಇದನ್ನು ತಿಳಿದ ಎನ್ ಜಿ ಓ ಸಂಸ್ಥೆಯೊಂದು 11 ಮಂದಿ ಜೀತದಾಳುಗಳನ್ನು ರಕ್ಷಿಸಿ ಜಿಗಣಿ ಪೊಲೀಸ್ ಠಾಣೆಗೆ ಕರೆತಂದು ಆನೇಕಲ್ ತಹಶಿಲ್ದಾರ್ ದಿನೇಶ್ ಬಾಬು ರವರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣ ಸಂಬಂದ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಟುಂಬದ ಎಲ್ಲರನ್ನ ವಿಮುಕ್ತಿಗೊಳಿಸಿದ ಬಳಿಕ ಹುಟ್ಟೂರಾದ ಡೆಂಕಣಿಕೋಟೆಗೆ ಕಳಿಸಿಕೊಡಲಾಗುವುದು ಎಂದು ತಹಶಿಲ್ದಾರ್ ದಿನೇಶ್ ತಿಳಿಸಿದರು. ಅಲ್ಲಿ ತಮಿಳುನಾಡು ಸರ್ಕಾರದಿಂದ ಇವರು ಪುನರ್ವಸತಿ ಪಡೆಯಬಹುದಾಗಿದೆ.

ಆನೇಕಲ್ ನ್ಯೂಸ್. ಕಾಮ್

Leave a Reply

Your email address will not be published. Required fields are marked *