ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಜಿಗಣಿ- ಕನಿಷ್ಟ ವೇತನ, ವರ್ಗಾವಣೆ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಆನೇಕಲ್ 19- ಆನೇಕಲ್ ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಲ್ ಪೊರ್ಜ್ ಕಾರ್ಖಾನೆ ವಿರುದ್ದ ಇಲ್ಲಿನ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲಿನ ಮ್ಯಾನೇಜ್‌ಮೆಂಟ್‌ನ ಕಾರ್ಮಿಕ ವಿರೋಧಿ ದೋರಣೆ.. ಹೌದು ಸುಮಾರು ೧೦ ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಸಂಬಳ ಹೆಚ್ಚು ಮಾಡದೇ ದುಡಿಸಿಕೊಳ್ಳುತ್ತಿರುವ ಕಂಪನಿ ಈ ಬಗ್ಗೆ ದ್ವನಿ ಎತ್ತುವ ಕಾರ್ಮಿಕರನ್ನ ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡುವ ಮೂಲಕ ಸರ್ವಾಧಿಕಾರಿಯಾಗಿ ವರ್ತನೆ ಮಾಡುತ್ತಿದೆ. ಹೀಗಾಗಿ ಇಂದು ಸುಮಾರು ೩೦೦ ಕ್ಕೂ ಹೆಚ್ಚು ಕಾರ್ಮಿಕರು ಕಂಪನಿ ಮುಂಭಾಗ ಹೋರಾಟ ನಡೆಸಿದರು. ಕಂಪನಿಯ ೯೫ ಜನರಿಗೆ ೯ ದಿನಗಳ ಸಂಬಳವನ್ನ ಕಡಿತಗೊಳಿಸಿದೆ, ಮುಷ್ಕರ ಮಾಡುತ್ತಿರುವ ಕಾರ್ಮಿಕ ಸಂಘಟನೆಯ ಸದಸ್ಯರಿಗೆ ಮ್ಯಾನೆಜ್‌ಮೆಂಟ್ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದು ಇದರಿಂದ ರೋಸಿ ಹೋದ ಕಾರ್ಮಿಕರು ಇಂದು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ, ಸಂಬಳ ಹೆಚ್ಚು ಮಾಡುವಂತೆ ಕಾರ್ಮಿಕ ಆಯುಕ್ತರಿಗೂ ಮನವಿ ಮಾಡಲಾಗಿದೆ. ಆದರೂ ಆಡಳಿತ ಮಂಢಳಿ ಕ್ಯಾರೆ ಎನ್ನತ್ತಿಲ್ಲ. ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಉಪಕರಣಗಳನ್ನ ಸಹ ಕಂಪನಿ ನೀಡುತ್ತಿಲ್ಲ ಹೀಗಾಗಿ ಕಳೆದ ೬ ತಿಂಗಳಿನಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹೀಗಾಗಿ ನಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಿದರೂ ಸಂಬಳವನ್ನ ಹೆಚ್ಚು ಮಾಡದೇ ಕಾರ್ಮಿಕ ವಿರೋಧಿಯಾಗಿ ಕೆಲಸ ಮಾಡುವ ಮ್ಯಾನೇಜ್‌ಮೆಂಟ್ ವಿರುದ್ದ ಕಾರ್ಮಿಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *