ಪ್ರಚಲಿತ ವಿದ್ಯಮಾನ

ಚಿನ್ನದ ಪದಕ ವಿಜೇತೆಗೆ ಅಭಿನಂದನೆ ಮಹಾಪೂರ

ಆನೇಕಲ್‍: ದುಬೈನಲ್ಲಿ ನಡೆದ ಅಂತರ್ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಸ್ಫರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನದ ಪದಕವನ್ನ ಪಡೆದ ಆನೇಕಲ್‍ನ ಕುಮಾರಿ ಶಾಲಿನಿಗೆ ಆನೇಕಲ್‍ನಲ್ಲಿ ಭರ್ಜರಿ ಸ್ವಾಗತವನ್ನ ಕೊರಲಾಯಿತು. ಇಲ್ಲಿನ ಸೊಲೂರು ಗ್ರಾಮದಲ್ಲಿ ವಾಸವಾಗಿದ್ದ ಗುರುಮೂರ್ತಿ ಹಾಗೂ ವನಜಾಕ್ಷಿರವರ ಮಗಳಾದ ಶಾಲಿನಿ ಇತ್ತಿಚೆಗೆ ನಡೆದ ಅಂತರ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಚಿನ್ನದ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಹೀಗಾಗಿ ತಾಲ್ಲೂಕಿನ ಹಲವು ಶಾಲಾ ಕಾಲೇಜುಗಳು ಈಕೆಗೆ ಇಂದು ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದವು. ಆನೇಕಲ್ ಪಬ್ಲಿಕ್ ಶಾಲೆ ವತಿಯಿಂದ ಶಾಲಿನಿಯವರಿಗೆ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಅಲ್ಲದೇ ದೇಶಕ್ಕೆ ಕಿರ್ತಿ ತಂದ ಶಾಲಿನಿಯವರು ಮುಂದೆ ಒಲಂಪಿಕ್ಸ್ ನಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಆರೈಸಿದರು, ಈ ವೇಳೆ ಮಾತನಾಡಿದ ಕುಮಾರಿ ಶಾಲಿನಿ ಯಾವುದೇ ಕೆಲಸಲ್ಲಾದರೂ ಶ್ರದ್ದೆ ಇಟ್ಟು ಮಾಡಿದರೆ ಖಂಡಿತ ಪ್ರತಿಫಲ ನಿರೀಕ್ಷೆ ಮಾಡಬಹುದು, ಹೀಗಾಗಿ ನನ್ನ ಗೆಲುವಿಗೆ ಕಾರಣರಾದ ಎಲ್ಲಾ ತರಬೇತುದಾರರಿಗೆ ಹಾಗೂ ಪ್ರೋತ್ಸಾಹ ನೀಡಿದ ತಂದೆ ತಾಯಂದಿರಿಗೆ ಧನ್ಯವಾದ ಸಲ್ಲಿಸಿದರು. ಇದಲ್ಲದೇ ಆನೇಕಲ್ ವಕೀಲರ ಸಂಘದಿಂದಲೂ ಶಾಲಿನಿರವರಿಗೆ ಅದ್ದೂರಿ ಸನ್ಮಾನ ನಡೆಸಲಾಯಿತು

Leave a Reply

Your email address will not be published. Required fields are marked *