ಪ್ರಚಲಿತ ವಿದ್ಯಮಾನ

ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ.

ಆನೇಕಲ್‌ 26: ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಆನೇಕಲ್‌ನ ಹೆಬ್ಬಗೋಡಿ ಬಳಿಯ ಗೊಲ್ಲಹಳ್ಳಿ ಬಳಿ ನಡೆದಿದೆ. ಹಾವೇರಿ ಮೂಲದ ೩೦ ವರ್ಷದ ಗುಡ್ಡಪ್ಪ ಕೊಲೆಯಾದ ವ್ಯಕ್ತಿ. ಗಿರೀಶ್ ಎಂಬಾತ ಇತನನ್ನ ಕೊಲೆ ಮಾಡಿರುವ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದೆ. ೩ ದಿನದ ಹಿಂದೆ ಗಿರೀಶ್ ಪತ್ನಿ ಪವಿತ್ರ ಹಾಗೂ ಗುಡ್ಡಪ್ಪ ಸ್ನೇಹಿತ ಜಗದೀಶ್ ಮನೆಯಿಂದ ಪರಾರಿಯಾಗಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಗಿರೀಶ್ ರಾತ್ರಿ ಅವರಿಬ್ಬರ ಬಗ್ಗೆ ವಿಚಾರಿಸಲು ಗುಡ್ಡಪ್ಪನನ್ನ ಗೊಲ್ಲಹಳ್ಳಿ ಮೈದಾನಕ್ಕೆ ಕರೆದಿದ್ದಾನೆ. ಅಲ್ಲದೇ ಮದ್ಯಪಾನ ಮಾಡಿ ಅವರಿಬ್ಬರ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾನೆ. ಈ ವೇಳೆ ಮಾಹಿತಿ ನೀಡದ ಹಿನ್ನೆಲೆ ಆತನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತನ್ನದಲ್ಲದ ತಪ್ಪಿಗೆ ಗುಡ್ಡಪ್ಪ ಹೆಣವಾಗಿದ್ದಾನೆ. ಗಿರೀಶ್ ತಲೆ ಮರೆಸಿಕೊಂಡಿದ್ದು ಹೆಬ್ಬಗೋಡಿ ಪೊಲೀಸರು ಆತನ ಪತ್ತೆಗೆ ಬಲೆ ಬಿಸಿದ್ದಾರೆ.

Leave a Reply

Your email address will not be published. Required fields are marked *