ವಿಜ್ಞಾನ

ಗೂಗಲ್ ನಕ್ಷೆಯಲ್ಲಿ ಕನ್ನಡ, ಇಂಗ್ಲೀಷ್ ನೊಡನೆ ಕನ್ನಡದಲ್ಲಿಯೂ ಇರಲಿದೆ ಸ್ಥಳಗಳ ಹೆಸರು

ಇನ್ನು ಮುಂದೆ ಗೂಗಲ್ ನಕಾಶೆ (ಮ್ಯಾಪ್) ನಲ್ಲಿ ಈಗ ಸ್ಥಳಗಳ ಹೆಸರನ್ನು ಕನ್ನಡದಲ್ಲಿಯೂ ಓದಿ ತಿಳಿಯಲು ಸಾದ್ಯ. ಇಲ್ಲಿಯವರೆಗೆ ಕೇವಲ ಇಂಗ್ಲಿಷ್‍ನಲ್ಲಿ ಮಾತ್ರ ಇದ್ದ ಸ್ಥಳ ನಾಮಗಳನ್ನು ಇಂಗ್ಲಿಷ್ ಜತೆಗೆ ಕನ್ನಡದಲ್ಲಿ ಸಹ ಪ್ರಕಟಿಸಿದ ಗೂಗಲ್ ಸಂಸ್ಥೆಯ ಕ್ರಮವನ್ನು ಕನ್ನಡಿಗರು ಕೊಂಡಾಡಿದ್ದಾರೆ.
ಇಷ್ಟೂ ದಿನ ತಮಿಳು ನಾಡಿನ ನಕ್ಷೆಗಳಲ್ಲಿ ತಮಿಳು, ಆಂದ್ರ ಪ್ರದೇಶದ ನಕ್ಷೆಗಳಲ್ಲಿ ತೆಲುಗು ಬರುತ್ತಿದ್ದರೂ ಕರ್ನಾಟಕದ ಭಾಗದ ನಕ್ಷೆಗಳಲ್ಲಿ ಕನ್ನಡ ಸಿಗುತ್ತಿರಲಿಲ್ಲ. ಆದರೆ ಇದೀಗ ಗೂಗಲ್ ನಕ್ಷೆಯಲ್ಲಿ ಕನ್ನಡ ಪ್ರತ್ಯಕ್ಷವಾಗಿದೆ. ಕೆಲವು ಕಡೆ ಸ್ಥಳಗಳ ಹೆಸರುಗಳಲ್ಲಿ ಅಕ್ಷರದೋಷಗಳಿವೆ. ಆದರೂ ಕ್ರಮೇಣ ಈ ಎಲ್ಲ ತಪ್ಪುಗಳು ಸರಿಯಾಗಲಿವೆ. ಏನೇ ಆದರೂ ಗೂಗಲ್ ನಲ್ಲಿ ನಮ್ಮ ಊರಿನ ಹೆಸರನ್ನು ನಮ್ಮ ಮಾತೃ ಭಾಷೆಯಲ್ಲೇ ಕಾಣುವಂತಾಗಿದ್ದು ರಾಜ್ಯೋತ್ಸವ ಸಮಯದಲ್ಲಿ ಗೂಗಲ್ ನಿಂದ ನಮ್ಮ ನಾಡಿಗೆ ಸಿಕ್ಕ ಉಡುಗೊರೆ ಎನ್ನಬಹುದು.
ಗೂಗಲ್ ಸಂಸ್ಥೆಯ ಈ ತೀರ್ಮಾನಕ್ಕೆ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *