ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಕಾವೇರಿ ಕುಡಿಯುವ ನೀರಿನ ಯೋಜನೆ; ಸಿಎಂ ಸಿದ್ದರಾಮಯ್ಯ ಚಾಲನೆ

ಆನೇಕಲ್09; ಆನೇಕಲ್ ತಾಲ್ಲೂಕಿನ ಜನ ಬಹು ದಿನಗಳಿಂದ ಎದುರು ನೊಡುತ್ತಿದ್ದ ಮಹಾತ್ವಕಾಂಕ್ಷೆಯ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಆನೇಕಲ್ ನ ಎ.ಎಸ್.ಬಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಟಿ.ಬಿ. ಜಯಚಂದ್ರ , ಕೆಜೆ ಜಾರ್ಜ್, ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು. ಆನೇಕಲ್ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಶಾಸಕ ಶಿವಣ್ಣ ನೇತೃತ್ವದಲ್ಲಿ ಸಿಎಂ ಚಾಲನೆ ನೀಡಿದರು. ಜೊತೆಗೆ 240 ಕೋಟಿಯ ಏತ ನೀರಾವರಿ ಕಾಮಗಾರಿ, 13 ಕೋಟಿಯ ಅಂಬೇಡ್ಕರ್ ಭವನ ಹಾಗೂ 5 ಕೋಟಿ ವೆಚ್ಚದ ತಾಲ್ಲೂಕು ಕ್ರಿಡಾಂಗಣ ಕಾಮಗಾರಿಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *