ಪ್ರಚಲಿತ ವಿದ್ಯಮಾನ

ಕರೆಂಟ್ ಶಾಕ್ – 9 ವರ್ಷದ ಬಾಲಕ ಬಲಿ

ಆನೇಕಲ್ 08: ಮನೆಯ ಮುಂದೆ ಅಟವಾಡುತ್ತಿದ್ದ ವೇಳೆ ವಿದ್ಯುತ್ ಹೈಟೇಕ್ಷನ್ ವೈರ್‌ಗೆ ಕೊಲು ತಗುಲಿದ ೯ ವರ್ಷದ ಬಾಲಕ ಮೃತಪಟ್ಟ ಘಟನೆ ಆನೇಕಲ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ನಾಗ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ ..ತ್ರಿಶೂಲ್ ಮೃತಪಟ್ಟ ಬಾಲಕ …ಎಂದಿನಂತೆ ತನ್ನ ಸ್ನೇಹಿತರ ಜತೆ ಅಟವಾಡುತ್ತಿದ್ದ ತ್ರಿಶೂಲ ಮನೆ ಪಕ್ಕದ ಕಾಪೌಂಡ್ ಪಕ್ಕದಲ್ಲಿ ಹೈಟೆಕ್ಷನ್ ವೈರ್ ಹಾದುಹೊಗಿತ್ತು .. ಈ ಹೈಟೇಕ್ಷನ್ ವೈರ್ ಬಾಲಕನ ಕೈಯಲ್ಲಿದ್ದ ಕೋಲು ತಗುಲಿದೆ , ಇದರಿಂದ ಬಾಲಕನಿಗೆ ಶೇಕಡ ೮೦% ಸುಟ್ಟ ಗಾಯಗಳು ಅಗಿದ್ದವು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಾಲಕನಿಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು ..ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ..ಇನ್ನು ಬಾಲಕ ಸಾವಿಗೆ ಕೆಪಿಟಿಸಿಲ್ ಬೆಸ್ಕಾನವರೇ ನೇರ ಹೊಣೆ ಕುಟುಂಬದವರು ಅರೋಪಿಸಿದ್ರು ..ಈ ಹಿಂದೆ ವಿದ್ಯುತ್ ಹೈಟೇಕಷನ್ ವೈರ್ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಸಹ ಮಾಡಿದ್ದರು ..ಅದರೆ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ ..ಬಾಲಕ ಸಾವನ್ನಪಿದ್ದರೂ ಬೆಸ್ಕಾಂನವರಾಗಲೀ ಅಥವಾ ಕೆಪಿಟಿಸಿಎಲ್ ಅಧಿಕಾರಿಗಳಾಗಲಿ ಭೇಟಿ ನೀಡಲಿಲ್ಲ ಎಂಬ ನೊವನ್ನ ಕುಟುಂಬದವರು ತೋಡಿಕೊಂಡರು..

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *