ಸಾಮಾನ್ಯ ಸುದ್ದಿ

ಎಸಿಡಿಟಿ ಸಮಸ್ಯೆಗೆ ಮನೆ ಮದ್ದು

Acidity Home remedy

ಬಹುತೇಕ ಜನರು ಆಹಾರ ಸೇವಿಸಿದ ತಕ್ಷಣ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದ್ರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗದೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾಗಿ ಆಹಾರ ಜೀರ್ಣವಾಗದೆ ಹೋದಲ್ಲಿ ಹೊಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ಉತ್ಪತ್ತಿಯಾಗಿ ಆಸಿಡಿಟಿ ಸಮಸ್ಯೆ ಕಾಡಲು ಶುರುವಾಗುತ್ತದೆ.

ಅನಿಯಮಿತ ಆಹಾರ ಸೇವನೆ, ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಸಾಕಷ್ಟು ನೀರು ಸೇವಿಸದಿರುವುದು, ಮಸಾಲೆಯುಕ್ತ ಹಾಗೂ ಜಂಕ್ ಫುಡ್ ಸೇವನೆ, ಒತ್ತಡ, ಧೂಮಪಾನ, ತುಂಬಾ ಹೊತ್ತು ಆಹಾರ ಸೇವಿಸದೆ ಇರೋದು ಎಸಿಡಿಟಿಗೆ ಕಾರಣವಾಗುತ್ತದೆ.

ಹೊಟ್ಟೆ ಉರಿ, ಎದೆಯುರಿ, ಹುಳಿ ತೇಗು, ಕಡಿಮೆ ಹಸಿವು, ಹೊಟ್ಟೆ ಉಬ್ಬರ ಇವೆಲ್ಲವೂ ಎಸಿಡಿಟಿಯ ಲಕ್ಷಣವಾಗಿದೆ.
ಎಸಿಡಿಟಿಯಿಂದ ಎದೆಯುರಿಯಾಗುತ್ತಿದ್ದರೆ ಏಲಕ್ಕಿಯನ್ನು ತಿನ್ನಿ. ಇದು ಎದೆಯುರಿಯನ್ನು ಕಡಿಮೆ ಮಾಡಿ ಆರಾಮ ನೀಡುತ್ತದೆ.
ಶುಂಠಿ ರಸಕ್ಕೆ ನಿಂಬೆ ರಸ ಹಾಗೂ ಜೇನು ತುಪ್ಪ ಸೇರಿಸಿ ಕುಡಿಯಿರಿ. ಇದು ಹೊಟ್ಟೆಯುರಿ ಕಡಿಮೆ ಮಾಡಿ ಎಸಿಡಿಟಿ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ಸೋಂಪು ಎಸಿಡಿಟಿಗೆ ಬೆಸ್ಟ್. ಊಟದ ನಂತರ ಸ್ವಲ್ಪ ಸೋಂಪು ತಿನ್ನುವುದ್ದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆ ಹಾಗೂ ಎದೆಯುರಿ ಕೂಡ ಕಡಿಮೆಯಾಗುತ್ತದೆ.
ಹೊಟ್ಟೆ ತುಂಬಿದ್ದರೂ ಹೊಟ್ಟೆಯುರಿ ಕಾಡುತ್ತಿದ್ದರೆ ಅಶ್ವಗಂಧವನ್ನು ಸೇವನೆ ಮಾಡಿ. ಇದ್ರಿಂದ ಸಾಕಷ್ಟು ಪ್ರಯೋಜನಗಳಿವೆ.
ಹಿಂದಿನವರು ಕೂಡ ಎಸಿಡಿಟಿ ಸಮಸ್ಯೆಗೆ ಚಂದನವನ್ನು ಬಳಸುತ್ತಿದ್ದರು. ಇದು ಹೊಟ್ಟೆಯುರಿ, ಎದೆಯುರಿ, ವಾಕರಿಕೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ.

Leave a Reply

Your email address will not be published. Required fields are marked *