ಪ್ರಚಲಿತ ವಿದ್ಯಮಾನ

 ಎಲೆಕ್ಟ್ರಾನಿಕ್ ಸಿಟಿ ಮೇಲು ಸೇತುವೆ, ಬಾರಿ ವಾಹನ ಪ್ರಯಾಣ ನಿಷೇದ

ಬೆಂಗಳೂರಿನ ಸಿಲ್ಕ್ ಬೊರ್ಡ್‍ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಎಲೆಕ್ಟ್ರಾನಿಕ್ ಮೇಲು ಸೇತುವೆ ಮೇಲೆ ಇಂದು ಸಂಜೆ 6 ಗಂಟೆಯಿಂದ ಬಾರಿ ವಾಹನಗಳ ಸಂಚಾರವನ್ನ ನಿಷೇದಿಸಲಾಗಿದೆ ಎಂದು ಬಿಇಟಿಎಲ್ ಮ್ಯಾನೇಜರ್ ಬಲದೇವ್ ಸಿಂಗ್ ತಿಳಿಸಿದ್ದಾರೆ. ಮೇಲು ಸೇತುವೆ ನಿರ್ಮಾಣವಾಗಿ 8 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿನಿಯಮದಂತೆ 9 ಜಾಯಿಂಟ್‍ಗಳನ್ನ ನಿರ್ವಹಣೆ ಮಾಡಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈ ಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಬಾರಿ ವಾಹನಗಳನ್ನ ಹೊರತು ಪಡಿಸಿ ಕಾರು ಹಾಗೂ ದ್ವಿಚಕ್ರ ವಾಹನಗಳನ್ನ ಎಂದಿನಂತೆ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲ 15 ದಿನ ಸಿಲ್ಕ್ ಬೊರ್ಡ್‍ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ನಿರ್ವಹಣಾ ಕಾರ್ಯ ನಡೆಸಲಾಗುವುದು. ಬಳಿಕ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೊರ್ಡ್‍ವರೆಗೆ ಎರಡು ಮಾರ್ಗದಲ್ಲಿ ನಿರ್ವಹಣೆ ಕಾರ್ಯ ನಡೆಸಲಾಗುವುದು ಎಂದು ಇದೇ ವೇಳೆ ಅವಉ ತಿಳಿಸಿದರು. ಒಟ್ಟು 1 ತಿಂಗಳ ಕಾಲ ನಿರ್ವಹಣೆ ಕಾರ್ಯ ನಡೆಯಲಿದ್ದು ಬಾರಿ ವಾಹನಗಳು ಪರ್ಯಾಯ ಮಾರ್ಗವನ್ನ ಅನುಸರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು

Leave a Reply

Your email address will not be published. Required fields are marked *