ಪ್ರಚಲಿತ ವಿದ್ಯಮಾನ

ಎನ್.ಟಿ.ಟಿ.ಎಫ್ ವಿದ್ಯಾಸಂಸ್ಥೆಯಿಂದ ಹೊಸ ತ್ರಿಡಿ ತಂತ್ರಜ್ಞಾನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಎಲೆಕ್ಟ್ರಾನಿಕ್ ಸಿಟಿ: ಜಾಗತೀಕ ಮಾರುಕಟ್ಟೆಯಲ್ಲಿ ಹೊಸ ವ್ಯಾಪಾರ ಹಾಗೂ ಉದ್ದೇಶಗಳನ್ನ ಇಟ್ಟುಕೊಂಡು ಹಲವು ಕೌಶಲ್ಯಭಿವೃದ್ದಿ ಕಾರ್ಯಕ್ರಮಗಳು ರೂಪಗೊಳ್ಳುತ್ತದೆ. ಅದೇ ರೀತಿ ಯುವಕರಿಗೆ ಹೊಸ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ನಿಟ್ಟೂರು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಇಂದು ಭವಿಷ್ಯದ ಕೌಶಲ್ಯ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ತರಬೇತಿ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಾಯಿತು. ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಪ್ರಗತಿಪರರು ಕಾರ್ಯಕ್ರಮವನ್ನ ಉದ್ಘಾಟಿಸಿ ಆಯಾ ಕ್ಷೇತ್ರಗಳ ಸವಾಲುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

 

ಪ್ರತಿದಿನ ಬೆಳೆಯುತ್ತಿರುವ ಐಟಿ ಉದ್ಯಮದಲ್ಲಿ ಹೊಸ ಹೊಸ ಆವಿಷ್ಕಾರಗಳ ಜೊತೆಗೆ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತಿದೆ. ಹಾಗಾಗಿಯೇ ಯುವಕರನ್ನ ಈ ರೀತಿಯ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಫ್ಯೂಚರ್ ಲರ್ನಿಂಗ್ ಸ್ಕಿಲ್ಸ್ ಪ್ರೋಗ್ರಾಂ ಅನ್ನ ಇಂದು ಲೋಕಾರ್ಪಣೆ ಮಾಡಲಾಯಿತು. ಆ ಮೂಲಕ ಉದ್ಯೋಗಿಗಳು ಸಹ ತ್ರಿಡಿ ತಂತ್ರಜ್ಞಾನದೊಂದಿಗೆ ಇಲ್ಲಿ ತರಬೇತಿ ಪಡೆಯುವ ಮೂಲಕ ಭವಿಷ್ಯದಲ್ಲಿ ಅತ್ಯುನ್ನತ ಕೆಲಸಗಳಿಗೆ ಸೇರಬಹುದಾಗಿದೆ ಹಾಗಾಗಿಯೇ ತ್ರಿಡಿ ಲರ್ನಿಂಗ್ , ಐಟಿ ರೀ ಸ್ಕಿಲಿಂಗ್ ಸೇರಿದಂತೆ ಹಲವು ತರಬೇತಿಯನ್ನ ಇಂದು ಲೋಕಾರ್ಪಣೆ ಮಾಡಲಾಯಿತು. ಆ ಮೂಲಕ ಮುಂದಿನ ಯುವಕರಿಗೆ ತಂತ್ರಜ್ಞಾನದ ಹೊಸ ಹೊಸ ಆಯಾಮಗಳನ್ನ ಪರಿಚಯಿಸುವ ಜೊತೆಗೆ ಎಲ್ಲಾ ರೀತಿಯ ಸವಾಲುಗಳನ್ನ ಅಣಿಗೊಳಿಸಲು ಈ ಕಾರ್ಯಕ್ರಮ ನೆರವಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಸಿಕೊಡಲಾಯಿತು.

 

Leave a Reply

Your email address will not be published. Required fields are marked *