ಪ್ರಚಲಿತ ವಿದ್ಯಮಾನ

ಆನೇಕಲ್- ಹಾಡು ಹಗಲೇ ಮನೆಯ ಬಾಗಿಲನ್ನ ಒಡೆದು ಕಳ್ಳತನ

ಆನೇಕಲ್ 02;  ಹಾಡು ಹಗಲೇ  ಮಾಡಿರುವ ಘಟನೆ ಆನೇಕಲ್ ಕಾವಲಹೊಸಹಳ್ಳಿ ಬಳಿಯ ಎಸ್,ಆರ್.ಆರ್ ಲೇಔಟ್ ಬಳಿ ನಡೆದಿದೆ. ಇಂದು ಮದ್ಯಾನ 12 ಗಂಟೆ ವೇಳೆಗೆ ಮಂಜುನಾಥ್ ರೆಡ್ಡಿ ಎಂಬುವವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಆದಾದ ಬಳಿಕ ಮನೆಯ ಬಾಗಿಲನ್ನ ಮುರಿದ ಖದೀಮರು ಮನೆಯಲ್ಲಿದ್ದ 2 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನವನ್ನ ದೋಚಿ ಪರಾರಿಯಾಗಿದ್ದಾರೆ. ಇದೇ ಲೇಔಟ್‍ನಲ್ಲಿ ಕಳೆದ 1 ತಿಂಗಳ ಹಿಂದೆಯಷ್ಟೇ ಕಳ್ಳರು ಮನೆಗಳ್ಳತನ ಮಾಡಿ ಲಕ್ಷಾಂತರ ಹಣವನ್ನ ದೋಚಿದ್ದರು ಈ ಘಟನೆ ಮಾಡುವ ಮುನ್ನವೇ ಮತ್ತೊಂದು ಮನೆಗೆ ಕನ್ನ ಹಾಕಿರುವ ಖದೀಮರು 8 ಲಕ್ಷ ಮೌಲ್ಯದ ವಸ್ತುಗಳನ್ನ ಕದ್ದಿದ್ದಾರೆ. ಇನ್ನೂ ಲೇಔಟ್‍ನಲ್ಲಿ ಜನರಿಲ್ಲದೇ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ಕಳ್ಳರ ಗ್ಯಾಂಗ್ ಕಳ್ಳತನ ಮಾಡುತ್ತಿದೆ. ಆನೇಕಲ್ ಪೊಲೀಸರು ಮಾತ್ರ ಪದೇ ಪದೇ ಕಳ್ಳತನ ನಡೆಯುತ್ತಿದ್ದರೂ ಕಳ್ಳರನ್ನ ಹಿಡಿಯುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಆನೇಕಲ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *