ಪ್ರಚಲಿತ ವಿದ್ಯಮಾನ

ಆನೇಕಲ್; ಮಾಜಿ ಪುರಸಭಾ ಅಧ್ಯಕ್ಷ ಅಶ್ವಥ್ ನಾರಾಯಣ್ ಇನ್ನಿಲ್ಲ

ಆನೇಕಲ್ ಪುರಸಭೆ ಮಾಜಿ ಅಧ್ಯಕ್ಷ್ಯ ಹಾಲಿ ಸದಸ್ಯರಾದ ಎನ್.ಎಸ್ ಅಶ್ವಥ್ ನಾರಾಯಣ್ (46) ಅನಾರೋಗ್ಯ ಹಿನ್ನೆಲೆ ಸೋಮವಾರ ರಾತ್ರಿ ನಿಧನವಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಪ್ರಮುಖ ಜೆಡಿಎಸ್ ಮುಖಂಡರು ಆಗಿದ್ದ ಅವರು ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಲ್ಲದೇ ಕೆಲ ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯಾನ ಆರೋಗ್ಯ ಏರು ಪೇರಾಗಿ ರಾತ್ರಿ ವೇಳೆಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನ ಅಗಲಿದ್ದಾರೆ. ಮೃತರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಅವರ ಮನೆ ಮುಂದೆ ಜಮಾಯಿಸಿದ್ದರು. ಮೃತರ ಗೌರವಾರ್ಥ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಪಾರ ಜನ ಸಮೂಹದ ನಡುವೆ ಥಳಿ ರಸ್ತೆಯ ಚೂಡೇನಹಳ್ಳಿ ಬಳಿ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.

ಇವರು ಅಧ್ಯಕ್ಷರಾಗಿದ್ದ ಎರಡೂವರೆ ವರ್ಷಗಳ ಕಾಲ ಆನೇಕಲ್ ನಗರದ ಚಿತ್ರಣವನ್ನೇ ಬದಲಾಯಿಸಿದ್ದರು. ಆನೇಕಲ್ ಮುಖ್ಯರಸ್ತೆಯಲ್ಲಿ ಪುಟ್ ಪಾತ್ ನಿರ್ಮಾಣ, ರಾಜ್ ಕುಮಾರ್ ಉದ್ಯಾನವನ, ಪ್ಲಾಸ್ಟಿಕ್ ನಿಷೇದ, ಚಿಕ್ಕಕೆರೆ ಕಲ್ಯಾಣಿ ಅಭಿವೃದ್ದಿ, ಕಾವೇರಿ ನೀರಿನ ಟ್ಯಾಂಕ್ ಕಟ್ಟಿಸುವ ಮೂಲಕ ಅನೇಕಲ್‍ಗೆ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದರು. ಇವರ ಸಹೋದರ ಹಾಲಿ ಪುರಸಭಾ ಸದಸ್ಯ ಪದ್ಮನಾಭರವರು ಸಹ ತಮ್ಮ ವಾರ್ಡ್ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದರು. ಇವರ ಅಗಲಿಕೆ ಕುಟುಂಬದವರಿಗೆ , ಸ್ನೇಹಿತರಿಗೆ ಅಪಾರ ನೋವು ತಂದಿದೆ. ಅಲ್ಲದೇ ಹಲವು ಪ್ರಮುಖ ರಾಜಕೀಯ ನಾಯಕರು ಅಗಲಿದ ನಾಯಕನಿಗೆ ಸಂತಾಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *