ಆನೇಕಲ್ ಸುದ್ದಿ

ಆನೇಕಲ್; ಬಸ್ ಗೆ ಲಾರಿ ಡಿಕ್ಕಿ ಒಬ್ಬ ಸಾವು

ಆನೇಕಲ್ 06; ತಮಿಳುನಾಡು ಸಾರಿಗೆ ಬಸ್ ಗೆ ಸರಕು ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಮತೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಹಾದುಹೋಗುವ ಚಂದಾಪುರ ಬಳಿಯ ತಿರುಮಗೊಂಡನಹಳ್ಳಿ ಬಳಿ ಇಂದು ಮುಂಜಾನೆ ೫ ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಸಾವನ್ನಪ್ಪಿರುವ ವ್ಯಕ್ತಿ ಬಸ್ ಚಾಲಕ ಎಂದು ಗುರುತಿಸಲಾಗಿದೆ. ಬಸ್ ನಲ್ಲಿ ಇಬ್ಬರು ಚಾಲಕರಿದ್ದು ಒರ್ವ ಹಿಂಬದಿ ಸಿಟಿನಲ್ಲಿ ಮಲಗಿದ್ದ ವೇಳೆ ಲಾರಿ ಹಿಂಬದಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ .ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತೊರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.ಲಾರಿಯ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸೂರ್ಯ ಸಿಟಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಆನೇಕಲ್ ನ್ಯೂಸ್.ಕಾಮ್

One Reply to “ಆನೇಕಲ್; ಬಸ್ ಗೆ ಲಾರಿ ಡಿಕ್ಕಿ ಒಬ್ಬ ಸಾವು

Leave a Reply

Your email address will not be published. Required fields are marked *