ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಆನೇಕಲ್: ಡಿಸೆಂಬರ್ 9ಕ್ಕೆ ಕಾವೇರಿ ನೀರು- ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಆನೇಕಲ್‌ನ ತಾಲ್ಲೂಕಿನ ಬಹು ಮಹಾತ್ವಕಾಂಕ್ಷೆಯ ಯೋಜನೆಯಾದ ಕಾವೇರಿ ಕುಡಿಯುವ ನೀರಿನ ಯೋಜನೆ ಇದೇ ತಿಂಗಳ ಡಿಸೆಂಬರ್ 9 ರಂದು ಆನೇಕಲ್ ಜನರಿಗೆ ಸಮರ್ಪಣೆಯಾಗಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯನ್ನ ಲೋಕಾರ್ಪಣೆ ಮಾಡಲಿದ್ದು ಈ ಬಗ್ಗೆ ಆನೇಕಲ್ ಶಾಸಕ ಬಿ.ಶಿವಣ್ಣ ಇಂದು ಪತ್ರಿಕಾ ಗೊಷ್ಟಿ ಏರ್ಪಡಿಸಿದ್ದರು. 176 ಕೋಟಿ ವೆಚ್ಚದ ಈ ಕಾಮಗಾರಿಯನ್ನ ಕಳೆದ ಎರಡು ವರ್ಷಗಳಿಂದ ಪ್ರಗತಿಯಲ್ಲಿತ್ತು. ಈಗ ಕಾಮಗಾರಿ ಮುಗಿದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದ ಕಾವೇರಿ ಕುಡಿಯುವ ನೀರು ಆನೇಕಲ್ ಜನರಿಗೂ ಸಹ ಸಿಗುವಂತಾಗುತ್ತದೆ. ಇದರಿಂದ ಜನರ ಕುಡಿಯುವ ನೀರಿನ ಸಮಸ್ಯಗೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟಂತಾಗಿದೆ ಎಂದು ತಿಳಿಸಿದರು.

ಅಲ್ಲದೇ ಇದೇ ದಿನ 240 ಕೋಟಿ ವೆಚ್ಚದ ಏತ ನಿರಾವರಿ ಯೋಜನೆಯಡಿ ತಾಲ್ಲೂಕಿನ ೭೪ ಕೆರಗಳಿಗೆ ನೀರು ತುಂಬಿಸುವ ಯೋಜನೆಯನ್ನ ಸಹ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಹಾಗೂ ಆನೇಕಲ್ ಟೌನ್‌ನಲ್ಲಿ 13.25ಕೊಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ಹಾಗೂ 5 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರಿಡಾಂಗಣದ ಕಾಮಗಾರಿಗೂ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು. ಅಲ್ಲದೇ ತಾವು ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳು ಈಡೇರಿಸಿದ್ದು ಆನೇಕಲ್ ವಿಧಾನಸಭಾಕ್ಷೇತ್ರ ಚಿತ್ರಣ ಈಗ ಬದಲಾಗಿದೆ ಎಂದು ಶಾಸಕರು ಹೇಳಿದರು

ಆನೇಕಲ್ ನ್ಯೂಸ್.ಕಾಮ್

Leave a Reply

Your email address will not be published. Required fields are marked *