ಪ್ರಚಲಿತ ವಿದ್ಯಮಾನ

ಆನೇಕಲ್; ಎರಡು ಬೈಕ್ ಡಿಕ್ಕಿ, ಒಬ್ಬ ಸಾವು ಮೂವರಿಗೆ ಗಾಯ

ಆನೇಕಲ್ ೧೫; ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ, ಆನೇಕಲ್ ಅತ್ತಿಬೆಲೆ ರಸ್ತೆಯ ಬೆಸ್ತಮಾನಹಳ್ಳಿ ಬಳಿ ಇಂದು ಸಂಜೆ ಸುಮಾರು 7;30ರ ಸುಮಾರಿಗೆ 2 ಬೈಕ್’ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ತಾಲೂಕಿನ ಆದೂರು ಗ್ರಾಮದ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಬೆಸ್ತಮಾನ ಹಳ್ಳಿಯ ಅರುಣ್ ಶೆಟ್ಟಹಳ್ಳಿ ಗ್ರಾಮದ ಮುರಳಿ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *