ಪ್ರಚಲಿತ ವಿದ್ಯಮಾನ

ಆನೇಕಲ್ : ಉದ್ಯೋಗಿನಿ ಯೋಜನೆಯಲ್ಲಿ ಅವ್ಯವಹಾರ, ಸಿಡಿಪಿಓ ಜಯದೇವಿ ಅಮಾನತು

ಆನೇಕಲ್‌ 27: ಕೇಂದ್ರ ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ ಹಣದಲ್ಲಿ ಅಕ್ರಮ ನಡೆಸಿ ಅವ್ಯವಹಾರ ಮಾಡಿದ್ದ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಆನೇಕಲ್ ತಾಲ್ಲೂಕು ಶಿಶು ಯೋಜನೆ ಅಭಿವೃದ್ದಿ ಅಧಿಕಾರಿ ಜಯದೇವಿ ಹಾಗೂ ಹಿಂದಿನ ಅಭಿವೃದ್ದಿ ನಿರೀಕ್ಷಕಿ ವಿಜಯ ಕುಮಾರಿ ಅಮಾನತು ಆದ ಅಧಿಕಾರಿಗಳು ಆನೇಕಲ್ ತಾಲ್ಲೂಕಿನಲ್ಲಿ ಉದ್ಯೋಗಿನಿ ಯೋಜನೆಯಡಿಯಲ್ಲಿ ೨೬೧ ಜನ ಮಹಿಳೆಯರಿಗೆ ಕಿರು ಸಾಲ ಚೆಕ್ ವಿತರಣೆ ಮಾಡಬೇಕಿತು, ಅದಕ್ಕಾಗಿ ೧ ಕೋಟಿ ೧೧ ಲಕ್ಷ ಹಣ ಸಹ ಬಿಡುಗಡೆಯಾಗಿತ್ತು, ಆದರೆ ಇಬ್ಬರು ಅಧಿಕಾರಿಗಳು ಕೆಲವೇ ಕೆಲವು ಮಂದಿಗೆ ಹಣವನ್ನ ನೀಡಿ ಉಳಿದ ಹಣವನ್ನ ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಇದರಿಂದ ಮಾಯಸಂದ್ರ ಗ್ರಾಮದಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರು ಹೋರಾಟ ನಡೆಸಿ ಬೆಂ,ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ದೂರು ನೀಡಿದರು, ಈ ಬಗ್ಗೆ ತನಿಖೆ ನಡೆಸಿದಾಗ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ತಿಳಿದಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸಹ ಚರ್ಚೆ ನಡೆಸಿ ಈ ಇಬ್ಬರು ಅಧಿಕಾರಿಗಳನ್ನ ಅಮಾನತು ಗೊಳಿಸಲಾಗಿದೆ.

Leave a Reply

Your email address will not be published. Required fields are marked *