ಪ್ರಚಲಿತ ವಿದ್ಯಮಾನ

ಆನೇಕಲ್: ಇಂದು ವಿರೇಂದ್ರ ಹೆಗಡೆಯವರಿಂದ ವಿವಿಧ ಯೋಜನೆಗಳ ಉದ್ಘಾಟನೆ

 

ಗ್ರಾಮ ಕಲ್ಯಾಣ ಹಿನ್ನೆಲೆ ವಿವಿದ ಯೋಜನೆಗಳನ್ನು ಉಧ್ಘಾಟಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಪರಮ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರು ಆ.09 ಗುರುವಾರ ಆನೇಕಲ್ ನ ಚಂದಾಪುರಕ್ಕೆ ಆಗಮಿಸುತ್ತಿದ್ದಾರೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ನಿರ್ಧೇಶಕ ಆನಂದ ಸುವರ್ಣ ಅವರು ಹೇಳಿದರು.
ಆನೇಕಲ್ ನ ಹಳೇ ಚಂದಾಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಳೆದ 36 ವರ್ಷಗಳಿಂದ ನಾಡಿನಾದ್ಯಾಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಂಸ್ಥೆ ಗ್ರಾಮ ಕಲ್ಯಾಣಕ್ಕಾಗಿ ವಿವಿದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಅದರಂತೆ ಆನೇಕಲ್ ತಾಲೂಕಿನಲ್ಲಿಯೂ ಸಹಾ 2 ವರ್ಷಗಳಿಂದ ಸಂಸ್ಥೆ ವತಿಯಿಂದ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಈಗಾಗಲೇ ಸುಮಾರು 22 ಸಾವಿರ ಜನ ಈ ಸಂಸ್ಥೆಗೆ ಸೇರಿಕೊಂಡು ಪ್ರಗತಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಎರಡು ಕೆರೆಗಳ ಪುನಶ್ವೇತನ ಗೊಳಿಸಲು ಊಳೆತ್ತುವ ಕಾರ್ಯಕ್ರಮ ಅಮ್ಮಿಕೊಂಡು ತಾಲೂಕಿನ ಮಾಯಸಂದ್ರ ಹಾಗೂ ಹೊನ್ನಕಳಸಾಪುರ ಕೆರೆಗಳನ್ನು ಅಭಿವೃದ್ದಿ ಪಡಿಸಿರುವುದಾಗಿ ಅವರು ಹೇಳಿದರು.

 

 

ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಮೂಲಕ ಅವರುಗಳ ಕುಟುಂಬ ಅಭಿವೃದ್ದಿಗೆ ಶ್ರಮಿಸುವುದು, ಇದರ ಜೊತೆಗೆ ಆರ್ಥಿಕವಾಗಿ ಹಿಂದಿರುವ ಕುಟುಂಬದ ವಿಧ್ಯಾರ್ಥಿಗಳು ಶಾಲಾ ಕಾಲೇಜು ಬಿಟ್ಟು ಮನೆಯಲ್ಲಿದ್ದರೆ ಅಂತಹವರನ್ನು ಹುಡುಕಿ ಅವರ ಶಾಲಾ ಶುಲ್ಕ ಪಾವತಿಸಿ ಅವರನ್ನು ಮರಳಿ ಶಾಲೆಗೆ ಕಳುಹಿಸುವ ಕೆಲಸ ಮಾಡುವುದು, ಕುಟುಂಬ ಮೂಲ ಸೌಲಭ್ಯಗಳಿಗೆ ಮತ್ತು ಸ್ವ ಉಧ್ಯೋಗವಕಾಶಗಳಿಗೆ ಹೆಚ್ಚು ಒತ್ತನ್ನು ನೀಡುವುದು ಸೇರಿದಂತೆ ಇನ್ನೂ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಸಂಸ್ಥೆ ಮಾಡಿಕೊಂಡು ಬರುತ್ತಿದ್ದು ಇದರ ಮತ್ತಷ್ಟು ಉಪಯೋಗಗಳನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಅಧಿಕಾರಿಗಳು ತಿಳಿಸಿದರು,

Leave a Reply

Your email address will not be published. Required fields are marked *