ಪ್ರಚಲಿತ ವಿದ್ಯಮಾನ

ಆನೇಕಲ್‍ : ಕೇರಳ ಸಂತ್ರಸ್ಥರಿಗೆ ಕಾವೇರಿ ವಿದ್ಯಾ ಸಂಸ್ಥೆಯಿಂದ ನೆರವು

 

ಆನೇಕಲ್‍;

ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಇಡೀ ದೇಶವೇ ಕಂಬನಿ ಮಿಡಿದಿದೆ. ದೇಶದ ಹಲವು ಭಾಗಗಳಿಂದ ಕೇರಳ ಸಂತ್ರಸ್ಥರಿಗೆ ಪ್ರವಾಹದ ರೀತಿಯಲ್ಲಿ ದಿನ ಬಳಕೆಯ ವಸ್ತುಗಳನ್ನ ರವಾನೆ ಮಾಡಲಾಗುತ್ತಿದೆ. ಅದೇ ರೀತಿ ಆನೇಕಲ್‍ನ ಕಾವೇರಿ ವಿದ್ಯಾ ಸಂಸ್ಥೆ ವತಿಯಿಂದ ಕೇರಳದಲ್ಲಿ ನೊಂದವರ ಕುಟುಂಬಗಳಿಗೆ ನೆರವು ನೀಡಲು ಚಿಂತಿಸಿದ್ದು ಸುಮಾರು 280 ಕುಟುಂಬಗಳಿಗೆ ದಿನನಿತ್ಯಕ್ಕೆ ಅವಶ್ಯಕವಾಗಿರುವ ವಸ್ತುಗಳನ್ನ ಒಂದು ಕವರ್‍ನಲ್ಲಿ ಪ್ಯಾಕ್ ಮಾಡಿ ಕೇರಳಕ್ಕೆ ರವಾನೆ ಮಾಡಲಾಗುತ್ತಿದೆ. ಕೇರಳ ವೈನಾಡು ಗಡಿಭಾಗದಲ್ಲಿರುವ ಆದಿವಾಸಿ ಬುಡಗಟ್ಟು ತಾಂಡ್ಯಗಳಿಗೆ ಈ ವಸ್ತುಗಳನ್ನ ಖುದ್ದಾಗಿ ಶಾಲಾ ಸಿಬ್ಬಂದಿಗಳೇ ಹೋಗಿ ತಲುಪಿಸಿ ಬರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಒಂದು ಕವರ್‍ನಲ್ಲಿ ನಾಲ್ಕು ಜನಕ್ಕೆ ಬೇಕಾದ ಬಟ್ಟೆ, ಪೆಸ್ಟ್, ಬ್ರಷ್, ಸೋಪು, ಮೆಡಿಸನ್ಸ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನ ವಿದ್ಯಾರ್ಥಿಗಳೇ ಪ್ಯಾಕ್ ಮಾಡಿ ಕಳುಹಿಸಿಕೊಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಶಾಲಾ ಮುಖ್ಯಸ್ಥರಾದ ಸುನೀತಾ ಕಳೆದ ಬಾರಿ ತಮಿಳುನಾಡಿನಲ್ಲಿ ಸುನಾಮಿಯಾದ ವೇಳೆ ಶಾಲೆಯಿಂದ ಲಕ್ಷಾಂತರ ರೂ ವಸ್ತುಗಳನ್ನ ಕಳುಹಿಸಿಕೊಡಲಾಗಿತ್ತು, ಅದೇ ರೀತಿ ಕೇರಳದಲ್ಲೂ ಸಹ ನೊಂದ ಕುಟುಂಬಗಳಿಗೆ ಕೈಲಾದ ಸಹಾಯವನ್ನ ಮಾಡಬೇಕು ಹಾಗಾಗಿ ನಮ್ಮ ಕಾಲೇಜಿನ ಮಕ್ಕಳು ಒಟ್ಟು ಗೂಡಿ 280 ಕುಟುಂಬಗಳಿಗೆ ಬೇಕಾಗುವ ವಸ್ತುಗಳನ್ನ ಒಟ್ಟುಗೂಡಿಸಿ ಕೇರಳಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಇದೇ ರೀತಿ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *