ಪ್ರಚಲಿತ ವಿದ್ಯಮಾನ

ಆನೇಕಲ್‍ನಲ್ಲಿ ಉಚಿತ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

 

ಆನೇಕಲ್: ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ, ಆನೇಕಲ್ ಪಟ್ಟಣದಲ್ಲೂ ಸಹ ಹಣ ನೀಡಿ ಶುದ್ದ ಕುಡಿಯುವ ನೀರಿನ ಕ್ಯಾನ್‍ಗಳನ್ನ ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಆನೇಕಲ್‍ನ ಪಟ್ಟಣದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್ ನಂ 8 ರಲ್ಲಿ ಉಚಿತ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಇಂದು ಚಾಲನೆ ನೀಡಲಾಗಿದೆ. ಇಲ್ಲಿನ ಸಮಾಜ ಸೇವಕರು ಹಾಗೂ ಸಂಗೋಳ್ಳಿ ರಾಯಣ್ಣ ಬ್ರಿಗೇಡ್‍ನ ರಾಜ್ಯ ಮುಖಂಡರಾದ ದೊಡ್ಡಯ್ಯರವರು ತಮ್ಮ ಸ್ವಂತ ಖರ್ಚಿನಲ್ಲಿ ಕುಡಿಯುವ ನೀರಿನ ಘಟಕವನ್ನ ಸ್ಥಾಪನೆ ಮಾಡಿ ಇಂದು ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಆನೇಕಲ್ ಸುತ್ತಮುತ್ತ 1500 ರಿಂದ 2000 ಅಡಿಗಳು ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕಿದರೂ ಆ ನೀರಿನಲ್ಲಿ ಪ್ಲೋರೈಡ್ ಯುಕ್ತ ಅಂಶ ಹೆಚ್ಚಿದ್ದು ಕುಡಿಯಲು ಯೋಗ್ಯವಾಗಿರುವುದಿಲ್ಲ ಹೀಗಾಗಿ ನಮ್ಮ ಆನೇಕಲ್ ಪಟ್ಟಣದ ಎಲ್ಲಾ ಜನರಿಗೂ ಇಲ್ಲಿ ಉಚಿತವಾಗಿ ಕುಡಿಯುವ ನೀರನ್ನ ಪೂರೈಕೆ ಮಾಡುವ ಸಲುವಾಗಿ ಈ ಉಚಿತ ಕುಡಿಯುವ ನೀರಿನ ಘಟಕವನ್ನ ಇಂದು ಉದ್ಘಾಟನೆ ಮಾಡಲಾಗಿದೆ ಎಂದರು. ಇನ್ನೂ ಇಷ್ಟು ದಿನ 25 ಲೀಟರ್ ನೀರಿಗೆ 15 ರಿಂದ 20 ರೂಗಳನ್ನ ವ್ಯಯ ಮಾಡಬೇಕಾಗಿದ್ದ ಇಲ್ಲಿನ ಮಂದಿ ಇಂದಿನಿಂದ ಉಚಿತವಾಗಿ ಶುದ್ದ ಕುಡಿಯುವ ನೀರನ್ನ ಪಡೆಯುವ ಮೂಲಕ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು ಎಂದು ಸಂತಸದ ನಗೆ ಬೀರಿದರು.

Leave a Reply

Your email address will not be published. Required fields are marked *